ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಬಿಜೆಪಿಯ ಯಾವ ತಂತ್ರವೂ ಫಲಿಸಲಿಲ್ಲ. ಜೆಡಿಎಸ್ ಕೂಡ ಈ ಬಾರಿ ಠುಸ್ ಆಯಿತು. ಬಿಜೆಪಿಗೆ ಭಜರಂಗ ಬಲಿ ಕೂಡ ಕೈ ಕೊಟ್ಟ. ಸದ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಅದು ಮತದಾನಕ್ಕೂ ಮುನ್ನ ನೀಡಿರುವ ಭರವಸೆ ಈಡೇರಿಸುತ್ತದೆಯೇ? ಹಾಗಾದರೆ ಅದು ನೀಡಿರುವ ಭರವಸೆಗಳೇನು?
ಚುನಾವಣಾ ಪ್ರಣಾಳಿಕೆಯಲ್ಲಿ (Congress Manifesto) 5 ಗ್ಯಾರಂಟಿಗಳು ಪ್ರಮುಖ ಹೈಲೈಟ್ ಆಗಿವೆ. ಸರ್ವಜನಾಂಗದ ಶಾಂತಿಯ ತೋಟ ಹೆಸರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಇದರಲ್ಲಿ 5 ಗ್ಯಾರಂಟಿಗಳು ಇವೆ.
- ಗೃಹ ಜ್ಯೋತಿ– ಪ್ರತೀ ಮನೆಗೂ 200 ಯೂನಿಟ್ ಉಚಿತ ವಿದ್ಯುತ್
- ಗೃಹ ಲಕ್ಷ್ಮೀ– ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ ಸಹಾಯಧನ
- ಅನ್ನ ಭಾಗ್ಯ: ಬಿಪಿಎಲ್ ಕುಟುಂಬಗಳಿಗೆ ಉಚಿತ 10 ಕಿಲೋ ಆಹಾರಧಾನ್ಯ
- ಯುವ ನಿಧಿ: ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ, ಡಿಪ್ಲೊಮಾ ನಿರುದ್ಯೋಗಿಗಳಿಗೆ ತಿಂಗಳಿಗೆ 1,500 ರೂ ಸಹಾಯಧನ
ರಾಜ್ಯದಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂದು ಐದು ಗ್ಯಾರಂಟಿ ನೀಡಿದೆ. ಅಲ್ಲದೇ, ಇದರೊಂದಿಗೆ ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಒಂದೇ ವರ್ಷದಲ್ಲಿ ಭರ್ತಿ ಮಾಡಿಕೊಳ್ಳುವುದು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಖಾಯಂ ಮಾಡುವುದು. ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರ ರೂ. ಗೆ ಹೆಚ್ಚಳ. ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 10,000 ರೂಗೆ ಹೆಚ್ಚಳ, ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ, ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ಯೆ, ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ ಸೇರಿದಂತೆ ಇನ್ನು ಹಲವು ವಿಷಯಗಳು ಪ್ರಣಾಳಿಕೆಯಲ್ಲಿ ಸೇರಿವೆ.