ಅಧಿಕಾರದ ಗದ್ದುಗೆಯ ಕನಸು ಕಾಣುತ್ತಿದ್ದ ಬಿಜೆಪಿಗೆ ಕರ್ನಾಟಕ ಮತದಾರರು ದೊಡ್ಡ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಆಶೀರ್ವಾದ ನೀಡಿದ್ದಾನೆ. ಫಲಿತಾಂಶದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Naleen Kumar Kateel) ಮಾತನಾಡಿ, ಬಿಜೆಪಿ ಸೋಲಿನ ಹೊಣೆ ಹೊರುವುದಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ‘ಬಿಜೆಪಿ (BJP) ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದಕ್ಕೆ ರಾಜ್ಯದ ಜನತೆಗೆ ಧನ್ಯವಾದಗಳನ್ನು ಸಲ್ಲಿಸ್ತೇನೆ. ಗೆದ್ದ ಬಿಜೆಪಿ ಅಭ್ಯರ್ಥಿಗಳಿಗೆ ಹಾಗೂ ಕಾಂಗ್ರೆಸ್‌ಗೂ ಅಭಿನಂದನೆ ಸಲ್ಲಿಸುತ್ತೇನೆ. ಜನತಾ ಆಶೀರ್ವಾದ ಸ್ವಾಗತಿಸ್ತೇನೆ. ರಾಜ್ಯ ಒಳ್ಳೆಯ ಕಾರ್ಯಗಳಿಗೆ ಸ್ವಾಗತ ಕೊಟ್ಟಿದ್ದೇವೆ. ವಿರೋಧಕ್ಕೆ ವಿರೋಧ ಮಾಡಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ಇಂದು ಬಂದಿರುವ ಫಲಿತಾಂಶವನ್ನು ನಾನು ಸ್ವಾಗತಿಸ್ತೇನೆ. ಸೋತಿರೋ ಕಡೆ ಯಾಕೆ ಸೋತಿದ್ದೇವೆ ಅಂತ ಪರಾಮರ್ಶೆ ಮಾಡುತ್ತೇವೆ ಎಂದು ಹೇಳಿದ್ದಾರೆ.

