ನವದೆಹಲಿ : ಬಂಗಾಳಕೊಲ್ಲಿಯಲ್ಲಿ (Bay of Bengal) ಸೃಷ್ಟಿಯಾಗಿರುವ ಮೋಚಾ ಚಂಡಮಾರುತ (Cyclone Mocha) ತೀವ್ರ ಸ್ವರೂಪ ತಾಳಿದ್ದು, ಪೋರ್ಟ್ ಬ್ಲೇರ್ ನಿಂದ 520 ಕಿ.ಮೀ ದೂರದ ಆಗ್ನೇಯ ದಿಕ್ಕಿನಲ್ಲಿ ಚಲಿಸುತ್ತಿದೆ.

ಮೋಚಾ ಚಂಡಮಾರುತ ಜನತೆಯನ್ನು ಭೀತಿಗೆ ತಳ್ಳಿದೆ. ಇದು ಕರಾವಳಿ ಭಾಗದಲ್ಲಿ ಇದರ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಬಂಗಾಳ (West Bengal) ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ತ್ರಿಪುರಾ, ಮಿಜೋರಾಂ ಮತ್ತು ಬಂಗಾಳದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂನಲ್ಲಿ ರಣಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಮೋಚಾ ಚಂಡಮಾರುತ ಬಳಿಕ ಬಾಂಗ್ಲಾದೇಶ ಮತ್ತು ಮಯನ್ಮಾರ್ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.