ನಟಿ ಸಮಂತಾ ಹಾಗೂ ನಟ ವಿಜಯ್ ದೇವರಕೊಂಡ ರೊಮ್ಯಾಂಟಿಕ್ ವಿಡಿಯೋವೊಂದು ವೈರಲ್ ಆಗಿದೆ. ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ನಟಿ ಸಮಂತಾ ರುತ್ ಪ್ರಭು ಸಖತ್ ಬ್ಯೂಸಿಯಾಗಿದ್ದಾರೆ. ಸದ್ಯ ಸಿಟಾಡೆಲ್ ಹಾಗೂ ಖುಷಿ ಸಿನಿಮಾದ ಶೂಟಿಂಗ್ ನಡೆಸುತ್ತಿದ್ದಾರೆ. ಖುಷಿ ಸಿನಿಮಾದಲ್ಲಿ ಸಮಂತಾ ಕೋ ಸ್ಟಾರ್ ಆಗಿ ವಿಜಯ್ ದೇವರಕೊಂಡ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕಾಶ್ಮಿರದಲ್ಲಿ ನಡೆಯುತ್ತಿದೆ.

ಇದೀಗ ಈ ಸಿನಿಮಾದ ಶೂಟಿಂಗ್ ವೇಳೆಯ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ವಿಜಯ್ ದೇವರಕೊಂಡ ಹಾಗೂ ಸಮಂತಾರ ರೋಮ್ಯಾಂಟಿಕ್ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ.
ಇತ್ತೀಚೆಗಷ್ಟೆ ಖುಷಿ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಈ ಸಾಂಗ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೂಟಿಂಗ್ ಸೆಟ್ ನಲ್ಲಿ ಇಬ್ಬರ ಸ್ನೇಹ ಬಾಂಧವ್ಯದಿಂದ ಇರುವ ವಿಡಿಯೋ ವಿಜಯ್ ದೇವರಕೊಂಡ ರಿಲೀಸ್ ಮಾಡಿದ್ದಾರೆ.
ಇಬ್ಬರನ್ನು ವಿಡಿಯೋದಲ್ಲಿ ನೋಡಿದ ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೂಪರ್ ಜೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಸಮಂತಾ ಈ ಹಿಂದೆ ಶಾಕುಂತಲಂ ಸಿನಿಮಾ ಫ್ಲಾಪ್ ಆಗಿತ್ತು. ಇನ್ನು ವಿಜಯ್ ದೇವರಕೊಂಡ ಅಭಿನಯದ ಟೈಸನ್ ಸಿನಿಮಾ ಕೂಡ ಫ್ಲಾಪ್ ಆಗಿತ್ತು. ಸದ್ಯ ಇಬ್ಬರ ನಟನೆಯ ಖುಷಿ ಸಿನಿಮಾ ಸೂಪರ್ ಹಿಟ್ ಆಗಿ ಕೆರಿಯರ್ ಮತ್ತೊಂದು ಬ್ರೇಕ್ ಕೊಡುತ್ತಾ ನೋಡಬೇಕು.