ಬಾಲಿವುಡ್ ನಟಿ ಹಾಗೂ ಪ್ರಿಯಾಂಕಾ ಚೋಪ್ರಾ ಕಸಿನ್ ಪರಿಣಿತಿ ಚೋಪ್ರಾ ತಾವು ಪ್ರೀತಿಸುತ್ತಿದ್ದವರ ಜೊತೆ ನಿನ್ನೆ ಎಂಗೇಜ್ ಮೆಂಟ್ ಆಗಿದ್ದಾರೆ. ನಿನ್ನೆ ಪರಿಣಿತಿ ಚೋಪ್ರಾ ಹಾಗೂ ರಾಜಕಾರಣಿ ರಾಘವ್ ಚಡ್ಡಾ ನಿಶ್ಚಿತಾರ್ಥವಾಗಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಪರಿಣಿತಿ ಚೋಪ್ರಾ ಸಿಂಪಲ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ತನ್ನ ನಿಶ್ಚಿತಾರ್ಥದ ಬಗ್ಗೆ ಟ್ವಿಟ್ ಮಾಡುವ ಮೂಲಕ್ ಅನೌನ್ಸ್ ಮಾಡಿದ್ದಾರೆ.
ಕೆಲವೇ ಫ್ಯಾಮಿಲಿ ಮೆಂಬರ್ಸ್ ಸಮ್ಮುಖದಲ್ಲಿ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಇದೇ ಅಕ್ಟೋಬರ್ ನಲ್ಲಿ ಮದುವೆಯಾಗಲಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಮದುವೆ ಹಾಗೂ ಮದುವೆಯಾಗುವ ಹುಡುಗನ ಬಗ್ಗೆ ಕೇಳಿದಾಗ, ರಾಜಕಾರಣಿಯನ್ನ ಮದುವೆಯಾಗಲ್ಲ್ ಅಂತ ಹೇಳಿದ್ದರು ಪರಿಣಿತಿ. ಆದರೆ ನೋಡಿ ಪ್ರೀತಿ ಎಲ್ಲಿ ಹೇಗೆ ಯಾವಾಗ ಯಾರ ಜೊತೆ ಹುಟ್ಟುತ್ತೆ ಅನ್ನೋದನ್ನ ಹೇಳೋದಕ್ಕೆ ಆಗಲ್ಲ.
ಮನಿಶ್ ಮಲ್ಹೋತ್ರಾ ತಯಾರಿಸಿದ ಡಿಸೈನರ್ ಡ್ರೆಸ್ ನ್ನ ನಿಶ್ಚಿತಾರ್ಥದಂದು ಪರಿಣಿತಿ ಹಾಕಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಡಿಸೈನಲ್ ಮನಿಶ್ ಮಲ್ಹೋತ್ರಾ ಬಂದಿದ್ದರು. ಸಿಂಪಲ್ ಲುಕ್ ಎಲಿಗೆಂಟ್ ಆಗಿ ಕಾಣ್ತಾ ಇದ್ದರು ಪರಿಣಿತಿ.
ಇನ್ನು ಪರಿಣಿತಿ ಎಂಗೇಜ್ ಮೆಂಟ್ ಗೆ ಕಸಿನ್ ಪ್ರಿಯಾಂಕಾ ಚೋಪ್ರಾ ಕೂಡ ಬಂದಿದ್ದರು. ಪ್ರಿಯಾಂಕಾ ಕೂಡ ತಂಗಿಗೆ ವಿಶ್ ಮಾಡಿ ತಮ್ಮ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ.