Kornersite

Bengaluru Just In Karnataka Politics State

Karnataka Election Result: ಗೆದ್ದು ಸೋತ ಸೌಮ್ಯಾ ರೆಡ್ಡಿ; ಭುಗಿಲೆದ್ದ ಆಕ್ರೋಶ!

Bangalore : ಜಯನಗರ (Jayanagar Constituency) ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ರಾತ್ರಿಯವರೆಗೂ ದೊಡ್ಡ ಗಟಾಲೆ, ಆತಂಕ ಶುರುವಾಗಿತ್ತು. ಅಲ್ಲಿ ಕೊನೆಗೂ ಚುನಾವಣಾ ಅಧಿಕಾರಿಗಳು ಬಗೆಹರಿಸಿದ್ದು, ಬಿಜೆಪಿ (BJP) ಅಭ್ಯರ್ಥಿ ರಾಮಮೂರ್ತಿ (Ramamurthy) ಗೆಲುವನ್ನು ಘೋಷಿಸಿದ್ದಾರೆ.

ಮೊದಲು ಜಯನಗರದಲ್ಲಿ ಸೌಮ್ಯಾ ರೆಡ್ಡಿ ಅವರ ಗೆಲುವು ಘೋಷಿಸಲಾಗಿತ್ತು. ಆನಂತರ, ಹಲವಾರು ಬಾರಿ ಮತ ಎಣಿಕೆ ನಡೆಸಿ, ಬಿಜೆಪಿ ಅಭ್ಯರ್ಥಿಯ ಜಯ ಘೋಷಿಸಲಾಗಿದೆ. ಕ್ಷಣ ಕ್ಷಣಕ್ಕೂ ಸ್ಧಳದಲ್ಲಿ ಬಿಗುವಿನ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತು. ಕೊನೆಗೂ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಅಲ್ಲಿ ಜಯ ಗಳಿಸಿದ್ದಾರೆ. ಆದರೆ, ಇದು ಮೋಸ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೌಂಟಿಂಗ್ ಸೆಂಟರ್ ಮುಂಭಾಗದಲ್ಲಿ ಸೌಮ್ಯಾ ರೆಡ್ಡಿ (Sowmya Reddy) ಕಣ್ಣೀರು ಸುರಿಸಿದ್ದಾರೆ. ಅಲ್ಲದೇ, ಕಾನೂನು ಹೋರಾಟಕ್ಕೂ ಅವರು ಮುಂದಾಗಿದ್ದಾರೆ.

ರೀಕೌಂಟಿಂಗ್‍ನಲ್ಲಿ ಬಿಜೆಪಿಗೆ ಮುನ್ನಡೆ ಹಿನ್ನೆಲೆಯಲ್ಲಿ ಜಯನಗರ ಕೌಂಟಿಂಗ್ ಸೆಂಟರ್ ಹತ್ತಿರ ಉದ್ವಗ್ನ ವಾತಾವರಣ ನಿರ್ಮಾಣವಾಗಿತ್ತು. ಡಿಕೆಶಿ ಸಹೋದರರು ಆಗಮಿಸಿದ್ದರು. ಪೊಲೀಸರ ವಿರುದ್ಧ ಅವರು ಕೂಡ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಇನ್ನೂ ಬಿಗುವಿನ ವಾತಾವರಣ ಇದೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು