ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಸಿಬಿಐ ನಿರ್ದೇಶಕರಾಗಿ ಎರಡು ವರ್ಷಗಳ ಕಾಲ ನೇಮಕಗೊಂಡಿದ್ದಾರೆ. ಈ ಕುರಿತ ಅಧಿಕೃತ ಆದೇಶ ಹೊರಬಿದ್ದಿದೆ.
ಪ್ರವೀಣ್ ಸೂದ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಮೇ 25 ರಂದು ಅಧಿಕಾರ ಸ್ವೀಕಾರ ಮಾಡಿದ್ದರು. ಎರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಆದ್ರೆ ಇದೀಗ ಸರ್ಕಾರ ಬದಲಾದ ಬೆನ್ನಲ್ಲೆ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಸಿಬಿಐ ನಿರ್ದೇಶಕ ಸುಬೋದ್ ಕುಮಾರ್ ಜೈಸ್ವಾಲ್ ಅವರ ಅಧಿಕಾರ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರವೀಣ್ ಸೂದ್ ಅವರನ್ನ ನೇಮಕ ಮಾಡಿದ್ದಾರೆ.
ಸೇವಾ ಹಿರಿತನ ಹೊಂದಿರುವ ಅಲೋಕ್ ಮೋಹನ್ ಅವರು ರಾಜ್ಯ ಡಿಜಿ/ಐಜಿಪಿ ಹುದ್ದೆಯ ಅಧಿಕಾರ ಸ್ವೀಕಾರ ಮಾಡುವ ಎಲ್ಲ ಪಾಸಿಬಿಲಿಟಿಗಳು ಇವೆ. ಸದ್ಯ ಅಲೋಕ್ ಮೋಹನ್ ಅಗ್ನಿಶಾಮಕ, ತುರ್ತು ಸೇವೆ ಹಾಗೂ ಗೃಹರಕ್ಷಕ ದಳದ ಡಿಜಿಪಿಯಾಗಿದ್ದಾರೆ. ಬಿಹಾರ ಮೂಲದ ಅಲೋಕ್ ಮೋಹನ್ 1987 ರಲ್ಲಿ ಐಪಿಎಸ್ ಗೆ ಆಯ್ಕೆ ಆಗಿದ್ರು.