Chitradurga: ಕರೆಂಟ್ ಬಿಲ್ ನಾವು ಕಟ್ಟಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು. ಕರೆಂಟ್ ಫ್ರೀ ಎಂದು ಕಾಂಗ್ರೆಸ್ (Congress) ನವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕರೆಂಟ್ ಬಿಲ್ಲ ಕಟ್ಟಲ್ಲ ಎಂದ ಗ್ರಾಮಸ್ಥರು.
ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಾಲು ಸಾಲಾಗಿ ಕಾಂಗ್ರೆಸ್ ನವರು ಆಶ್ವಾಸನೆಯನ್ನ (Manifesto)ನೀಡಿದ್ದರು. ಹೀಗಾಗಿ ಜನ ಕೂಡ ಈ ಬಗ್ಗೆಯೇ ಚರ್ಚೆ ಮಾಡಲು ಶುರುಮಾಡಿದ್ದಾರೆ. ಚಿತ್ರದುರ್ಗದಲ್ಲು ಇದೇ ಆಗಿದ್ದು. ಅಸಲಿಗೆ ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದವರು ಕರೆಂಟ್ ಬಿಲ್ ಕಟ್ಟಲು ನಿರಾಕರಿಸಿದ್ದಾರೆ.
ಬೆಸ್ಕಾಂ ಮೀಟರ್ ರೀಡರ್ ಮಾಡಲು ಬಂದವರಿಗೆ ಗ್ರಾಮಸ್ಥರು ಅವಾಜ್ ಹಾಕಿದ್ದಾರೆ. ಕರೆಂಟ್ ಫ್ರೀ ಎಂದು ಹೇಳಿದ್ದಾರೆ. ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಅವಾಜ್ ಹಾಕಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಗ್ರಾಮಸ್ಥರು ಕರೆಂಟ್ ಬಿಲ್ ಕಟ್ಟಲ್ಲ ಎಂದಾ ಮೀಟರ್ ರೀಡರ್ ಮಾಡಲು ಬಂದ ವ್ಯಕ್ತಿ ತಿಳಿ ಹೇಳಲು ಪ್ರಯತ್ನಿಸಿದ್ದಾರೆ. ಇನ್ನು ನಮಗೆ ಆದೇಶ ಬಂದಿಲ್ಲ. ಆದೇಶ ಬರೋವರೆಗೂ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದ್ರು ಕ್ಯಾರೇ ಅನ್ನದ ಗ್ರಾಮಸ್ಥರು ಮಾತ್ರ ಕಟ್ಟಲ್ಲ ರೀ ಕರೆಂಟ್ ಬಿಲ್ಲ್ ಕಟ್ಟಲ್ಲ ಎಂದು ಅವಾಜ್ ಹಾಕಿದ್ದಾರೆ.