ಬೆಂಗಳೂರು : ಕಾಂಗ್ರೆಸ್ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಡಿಕೆಶಿ ಕೈ ಚೆಲ್ಲಿದರಾ ಎಂಬ ಅನುಮಾನ ಮೂಡುತ್ತಿದೆ.
ಪೈಪೋಟಿಯ ಮಧ್ಯೆಯೇ ಡಿ.ಕೆ. ಶಿವಕುಮಾರ್ (DK Shivakumar) ತಮ್ಮ ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ. ಈ ಬೆಳವಣಿಗೆ ನೋಡಿದರೆ ಸಿಎಂ ಸ್ಥಾನ ಕೈತಪ್ಪುವ ಸುಳಿವು ಕನಕಪುರದ ಬಂಡೆಗೆ ಸಿಕ್ಕಿತಾ? ಸಿದ್ದರಾಮಯ್ಯ (Siddaramaiah) ಅವರನ್ನು ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸುತ್ತಾ? ಅಥವಾ ಬೇರೊಬ್ಬ ನಾಯಕನನ್ನು ಆಯ್ಕೆ ಮಾಡುತ್ತಾ? ಎಂಬ ಪ್ರಶ್ನೆ ಉದ್ಭವವಾಗುತ್ತಿದೆ.
ನನಗೆ ಆರೋಗ್ಯದ ಸಮಸ್ಯೆಯಿದೆ. ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದಾರೆ. ಹೊಟ್ಟೆ ನೋವಿದೆ. ವೈದ್ಯರು ಆಗಮಿಸುತ್ತಿದ್ದಾರೆ ಎಂದು ಹತಾಶೆಯ ಮಾತುಗಳನ್ನು ಆಡಿದ ಅವರು, ನನ್ನ ಜೊತೆ ಯಾವ ಶಾಸಕರು ಇಲ್ಲ, ನನಗೆ ಯಾರ ಬೆಂಬಲ ಬೇಡ. ಯಾರು ಯಾರನ್ನು ಬೇಕಾದರೂ ಕರೆದುಕೊಂಡು ಹೋಗಬಹುದು ಎಂದು ಹೇಳಿದ್ದಾರೆ.
ನನ್ನ ಬಳಿ 135 ಶಾಸಕರು ಇದ್ದಾರೆ, ಎಲ್ಲರೂ ಕಾಂಗ್ರೆಸ್ ಶಾಸಕರು. ನನಗೆ ಸಮಯದ ಪ್ರಜ್ಞೆ ಇದೆ, ಹೋರಾಟದ ಕಿಚ್ಚು ಇದೆ. ಹೋರಾಟದಲ್ಲಿ ಯಶಸ್ಸು ಸಿಗಬೇಕಾದರೆ ತಾಳ್ಮೆ ಇರಬೇಕು. ಧರ್ಮರಾಯರಂತೆ ತಾಳ್ಮೆ ಇರಬೇಕು. ನನ್ನನ್ನು ಬಂಡೆ ಅಂತಾ ನೀವು ಕರೆಯುತ್ತೀರಿ, ಬಂಡೆ ಅಂದರೆ ಪ್ರಕೃತಿ ಎಂದು ಹೇಳಿದ್ದಾರೆ. ಆದರೆ, ಅವರ ಈ ಮಾತುಗಳನ್ನು ಕೇಳಿದರೆ, ಸಿಎಂ ಸ್ಥಾನ ಕೈ ತಪ್ಪುವ ಸುಳಿವು ಅವರಿಗೆ ಸಿಕ್ಕಂತಾಗಿದೆ ಎಂಬ ಸಂಶಯ ಮೂಡುತ್ತಿದೆ.