Dharwad :ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ಉಪ ಮುಖ್ಯಮಂತ್ರಿ (Deputy Chief Minister) ಸ್ಥಾನ ನೀಡಬೇಕು ಎಂದು ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಅವರು ಜನಪ್ರಿಯ ಶಾಸಕರು. ಉತ್ತರ ಕರ್ನಾಟಕದ ಪ್ರಭಲ ನಾಯಕರು. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತಮವಾಗಿರುತ್ತದೆ. ಇದು ನನ್ನ ಸ್ವಂತ ವಿಚಾರ. ಸಾಮಾಜಿಕವಾಗಿ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದಾರೆ.
ವಿನಯ್ ಕುಲಕರ್ಣಿ ಮುರುಘಾಮಠದ (Murugamata) ಕಾರ್ಯಾಧ್ಯಕ್ಷರು. ಅವರ ಜೊತೆ ಉಳಿದ ಲಿಂಗಾಯತ ಶಾಸಕರಿಗೂ ಒಳ್ಳೆಯ ಸ್ಥಾನಮಾನ ನೀಡಬೇಕು. ವಿನಯ್ ಕುಲಕರ್ಣಿ ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಿದ್ದಾಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಹೇಳಿದ್ದಾರೆ.