Bangalore: ಡಿ.ಕೆ ಶಿವಕುಮಾರ್ (DK Shivakumar) ಅವರನ್ನೇ ಸಿಎಂ ಮಾಡಬೇಕು ಎಂದು ಓಲಾ-ಊಬರ್ (Ola Uber) ಚಾಲಕರ ಸಂಘಟನೆ ಆಗ್ರಹಿಸಿದೆ.
ಸದ್ಯ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ. ಸದ್ಯ ಡಿಕೆಶಿಗೆ ಬೆಂಬಲ ಸೂಚಿಸಿದ ಓಲಾ-ಊಬರ್ ಸಂಘಟನೆ ಡಿಕೆಶಿ ಸಿಎಂ, ಅವರ ಜೊತೆ ನಾವಿದ್ದೇವೆ ಎಂದು ಚಾಲಕರು ಬ್ಯಾನರ್ ಹಿಡಿದು ನಿಂತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಓಲಾ, ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷಾ, ಡಿ.ಕೆ ಶಿವಕುಮಾರ್ ಬಲಿಷ್ಟ ನಾಯಕರು. ಅಂತಹ ವ್ಯಕ್ತಿಗಳು ನಮಗೆ ಬೇಕು. ಎಲ್ಲಾ ನಾಯಕರನ್ನೂ ಬೆಂಬಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಡಿಕೆಶಿ ಚಾಲಕರ ಪರವಾಗಿ ನಿಂತವರು. ಹೀಗಾಗಿ ಅವರೇ ಸಿಎಂ ಆಗಲಿ ಎಂದು ಒತ್ತಾಯಿಸಿದ್ದಾರೆ.
ಅಲ್ಲದೇ, ಡಿಕೆಶಿ ಅವರನ್ನೇ ಸಿಎಂ ಆಗಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) , ಸಿದ್ದರಾಮಯ್ಯ (Siddaramaiah) ಹಾಗೂ ರಾಹುಲ್ ಗಾಂಧಿ (Rahul Gandhi) ಗೆ ಪತ್ರ ಬರೆಯಲಾಗಿದೆ ಎಂದು ಓಲಾ, ಸಂಘಟನೆ ತಿಳಿಸಿದೆ.