Chennai : ಫ್ಲೇ ಆಪ್ ಹಂತದಲ್ಲಿ ಚೆನ್ನೈ(Chennai Super Kings) ಮುನ್ನಗರಿಸಿದ್ದು, ಕೋಲ್ಕತ್ತಾ (Kolkata Knight Riders)ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಚೆನ್ನೈ ವಿರುದ್ಧ ಕಿಂಗ್ಸ್ 6 ವಿಕೆಟ್ ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ 6 ವಿಕೆಟ್ ಗಳನ್ನು ಕಳೆದುಕೊಂಡು 144 ರನ್ ಗಳಿಸಿತು. ಈ ಸುಲಭದ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ಕೋಲ್ಕತ್ತಾ 18.3 ಓವರ್ ಗಳಲ್ಲಿ 147 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕೋಲ್ಕತ್ತಾ 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡರೂ ನಾಲ್ಕನೇ ವಿಕೆಟಿಗೆ ನಿತೀಶ್ ರಾಣಾ ಮತ್ತು ರಿಂಕು ಸಿಂಗ್ 4ನೇ ವಿಕೆಟಿಗೆ 76 ಎಸೆತಗಳಲ್ಲಿ 99 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ಬರುವಂತೆ ಮಾಡಿದರು. ರಿಂಕು ಸಿಂಗ್ 54 ರನ್, ನಾಯಕ ನಿತೀಶ್ ರಾಣಾ ಔಟಾಗದೇ 57 ರನ್ ಸಿಡಿಸಿದರು. ಹೀಗಾಗಿ ಅಂಕಪಟ್ಟಿಯಲ್ಲಿ ಕೋಲ್ಕತ್ತಾ 12 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ಜಿಗಿದರೆ ಚೆನ್ನೈ 15 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿಯೇ ಮುಂದುವರೆದಿದೆ.
ಚೆನ್ನೈ ಪರ ಋತುರಾಜ್ ಗಾಯಕ್‌ವಾಡ್ 17 ರನ್, ಕಾನ್ವೇ 30 ರನ್, ಶಿವಂ ದುಬೆ 48 ರನ್, ರವೀಂದ್ರ ಜಡೇಜಾ 20 ರನ್ ಸಿಡಿಸಿದರು. ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್, ವೈಭವ್ ಅರೋರ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.