ಬೆಂಗಳೂರು: ಮತ್ತೆ ದೇಶದಲ್ಲಿ ಏರಿಳಿತದ ಹಾದಿ ಹಿಡಿದಿದ್ದ ಚಿನ್ನದ ಬೆಲೆ ಈಗ ಯತಾಸ್ಥಿತಿ ಕಾಪಾಡಿಕೊಂಡಿದೆ. ಹೀಗಾಗಿ ವೀಕೆಂಡ್ ನಲ್ಲಿ ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಳ್ಳಿ ಬೆಲೆಯ ಇಳಿಕೆಯೂ ನಿಂತಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 56,650 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 61,800 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,480 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 56,700 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 7,850 ರೂ. ಇದೆ.
ಸದ್ಯ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ ಮುಂದಿನ ದಿನಗಳ್ಲಲಿ 70 ಸಾವಿರ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 16ಕ್ಕೆ):
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 56,650 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 61,800 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 748 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,880 ರಿಂಗಿಟ್ (53,086 ರೂ.)
ದುಬೈ: 2255 ಡಿರಾಮ್ (50,513 ರೂ.)
ಅಮೆರಿಕ: 615 ಡಾಲರ್ (50,587 ರೂ.)
ಸಿಂಗಾಪುರ: 837 ಸಿಂಗಾಪುರ್ ಡಾಲರ್ (51,425 ರೂ.)
ಕತಾರ್: 2,315 ಕತಾರಿ ರಿಯಾಲ್ (52,299 ರೂ)
ಓಮನ್: 245.50 ಒಮಾನಿ ರಿಯಾಲ್ (52,456 ರೂ.)
ಕುವೇತ್: 191.50 ಕುವೇತಿ ದಿನಾರ್ (51,448 ರೂ.)