Kornersite

Just In Sports

IPL 2023: ಪ್ಲೇ ಆಫ್ ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಗುಜರಾತ್; ಹೈದರಾಬಾದ್ ಮನೆ ಕಡೆಗೆ!

ಅಹಮದಾಬಾದ್‌ : ಗುಜರಾತ್ ಟೈಟಾನ್ಸ್ ಟೈಟಾನ್ಸ್‌ (Gujarat Titans) ತಂಡವು ಶುಭಮನ್‌ ಗಿಲ್‌ (Shubman Gill) ಅವರ ಭರ್ಜರಿ ಶತಕ, ಮೊಹಮ್ಮದ್‌ ಶಮಿ, ಮೋಹಿತ್‌ ಶರ್ಮಾ ಮಾರಕ ಬೌಲಿಂಗ್‌ ದಾಳಿಯಿಂದಾಗಿ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿ, ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದೆ.

ಗುಜರಾತ್ ತಂಡವು ತಾನಾಡಿದ 13 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಸೋಲಿನ ಸರಪಳಿ ಮುಂದುವರೆಸಿರುವ ಹೈದರಾಬಾದ್‌ (Sunrisers Hyderabad) ತಂಡವು 12 ಪಂದ್ಯಗಳಲ್ಲಿ ಕೇವಕ 4ರಲ್ಲಿ ಗೆಲುವು ಸಾಧಿಸಿ ಬಹುತೇಕವಾಗಿ ಮನೆಯತ್ತ ಮುಖ ಮಾಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಟೈಟಾನ್ಸ್‌ 20 ಓವರ್‌ ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸಿತ್ತು. ಗೆಲುವಿಗೆ 189 ರನ್‌ ಗಳ ಬೃಹತ್‌ ಮೊತ್ತದ ಗುರಿ ಪಡೆದ ಹೈದರಾಬಾದ್‌ 20 ನಿಗದಿತ ಓವರ್‌ ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 154ರನ್‌ ಗಳನ್ನು ಮಾತ್ರ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್‌ ಕಳಸೇನ್‌ ಅರ್ಧಶತಕ ಗಳಿಸಿದರು. ಕಳಸೇನ್‌ 44 ಎಸೆತಗಳಲ್ಲಿ 64 ರನ್‌ ಸಿಡಿಸಿದರು. ಭುವನೇಶ್ವರ್‌ ಕುಮಾರ್‌ 27, ಮಯಾಂಕ್‌ ಮಾರ್ಕಂಡೆ 18 ರನ್‌ ಬಿಟ್ಟರೆ, ಹೈದರಾಬಾದ್ ತಂಡದಲ್ಲಿ ಬೇರೆ ಆಟಗಾರರು ಮಿಂಚಲಿಲ್ಲ. ಹೀಗಾಗಿ ಸೋಲು ಅನುಭವಿಸಿತು. ಗುಜರಾತ್‌ ಪರ 4, ಮೋಹಿತ್‌ ಶರ್ಮಾ 4, ಯಶ್‌ ದಯಾಳ್‌ 1 ವಿಕೆಟ್‌ ಪಡೆದರು.

ಶುಭಮನ್‌ ಗಿಲ್‌ ಶತಕ ಸಿಡಿಸಿ ಮಿಂಚಿದರು. 58 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್‌ನೊಂದಿಗೆ 101 ರನ್‌ ಗಳಿಸಿದರು. ಇದು ಐಪಿಎಲ್‌ನಲ್ಲಿ ಗಿಲ್‌ ಸಿಡಿಸಿದ ಚೊಚ್ಚಲ ಶತಕವಾಗಿದೆ. ಹೈದರಾಬಾದ್‌ ಪರ 5, ಮಾರ್ಕೊ ಜಾನ್ಸೆನ್‌, ಫಜಲ್‌ಹಕ್‌ ಫಾರೂಕಿ, ಟಿ. ನಟರಾಜನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್