ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಈಗಾಗಲೇ ಬಹುಮತ ಗಳಿಸಿದೆ. ಆದರೆ ಸಿಎಂ ಯಾರಾಗ್ತಾರೆ ಅನ್ನೋ ಹೈ ಡ್ರಾಮಾ ಕ್ರಿಯೇಟ್ ಆಗಿದ್ದು, ಇಂದು ಈ ಹೈಡ್ರಾಮಾಗೆ ತೆರೆ ಬೀಳುವ ಸಾಧ್ಯತೆ ಇದೆ. ಸದ್ಯ ಸಿಎಂ ಕುರ್ಚಿಯ ಗುದ್ದಾಟ ದೆಹಲಿಗೆ ಶಿಫ್ಟ್ ಆಗಿದೆ.
ಕೇವಲ ಸಿಎಂ ಹೆಸರು ಮಾತ್ರವಲ್ಲ, ನೂತನ ಸಚಿವರ ಆಯ್ಕೆ ಕೂಡ ಇಂದು ಫೈನಲ್ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್ ಹಿರಿಯ ನಾಯಕರಾದ ವೇಣುಗೋಪಾಲ್, ಸುರ್ಜೇವಾಲ 27 ಜಿಲ್ಲೆಗಳಿಂದ ಸಂಭ್ಯಾವರ ಪಟ್ಟಿ ತೆಗೆದುಕೊಂಡು ಹೋಗಿದ್ದಾರೆ. ಇದರಲ್ಲಿ ಒಟ್ಟು 49 ಮಂದಿಯ ಹೆಸರು ಇದೆ ಎನ್ನಲಾಗಿದೆ. ಹಾಗಾದ್ರೆ ಆ ಪಟ್ಟಿಯಲ್ಲಿ ಯಾರ್ಯಾರ ಹೆಸರು ಇದೆ ನೋಡೋಣ.
ಬೆಳಗಾವಿ ಜಿಲ್ಲೆಯಿಂದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ್ ಸವದಿ. ಬಾಗಲಕೋಟೆಯಿಂದ ಆರ್.ಬಿ ತಿಮ್ಮಾಪುರ್. ವಿಜಯಪುರದಿಂದ ಎಂ.ಬಿ ಪಾಟೀಲ್, ಯಶವಂತ್ ರಾಯಗೌಡ ಪಾಟೀಲ್, ಶಿವಾನಂದ್ ಪಾಟೀಲ್. ಕಲಬುರ್ಗಿಯಿಂದ ಪ್ರಿಯಾಲ್ ಖರ್ಗೆ, ಅಜಯ್ ಸಿಂಗ್, ಶರಣ್ ಪ್ರಕಾಶ್ ಪಾಟೀಲ್. ರಾಯಚೂರಿನಿಂದ ಬಸನಗೌಡ ತುರುವಿಹಾಳ. ಯಾದಗಿರಿಯಿಂದ ಶರಣಪ್ಪ ದರ್ಶನಾಪೂರ್.
ಬೀದರ್ ದಿಂದ ರಹೀಮ್ ಖಾನ್, ಈಶ್ವರ್ ಖಂಡ್ರೆ. ಕೊಪ್ಪಳದಿಂದ ರಾಘವೇಂದ್ರ ಹಿಟ್ನಾಳ್, ಬಸವರಾಜ್ ರಾಯರೆಡ್ಡಿ. ಗದಗದಿಂದ ಹೆಚ್.ಕೆ ಪಾಟೀಲ್. ಧಾರವಾಡದಿಂದ ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ. ಉತ್ತರ ಕನ್ನಡದಿಂದ ಬೀಮಣ್ಣ್ ನಾಯಕ. ಹಾವೇರಿಯಿಂದ ರುದ್ರಪ್ಪ ಲಮಾಣಿ. ಬಳ್ಳಾರಿಯಿಂದ ನಾಗೇಂದ್ರ ಹಾಗೂ ತುಕಾರಾಮ್. ಹೀಗೆ ಶಿವಮೊಗ್ಗ, ಚಿಕ್ಕಬಳ್ಳಾಪುರ, ಕೋಲಾರ , ಬೆಂಗಳೂರು, ಮಂಡ್ಯ, ಮಂಗಳೂರು , ಮೈಸೂರು, ಬೆಂಗಳೂರು ಗ್ರಾಮಾಂತರದಿಂದ ಅಭ್ಯರ್ಥಿಗಳ ಪಟ್ಟಿ ಹೊರಬೀಳಲಿದೆ.

