ಪ್ರೀತಿಸಿದ ಯುವಕ ಕೈ ಕೊಟ್ಟಿದ್ದಾನೆಂದು ಆರೋಪಿಸಿ, ಹಾವೇರಿಯ ಯುವತಿಯೋರ್ವಳು ಯುವಕನ ಮನೆಯ ಮುಂದೆ ಧರಣಿ ನಡೆಸಿರುವ ಘಟನೆ ನಡೆದಿದೆ.

ಈ ಘಟನೆ ಕಾರವಾರದ ಮುಂಡಗೋಡ ತಾಲ್ಲೂಕಿನ ಮೈನಳ್ಳಿಯಲ್ಲಿ ನಡೆದಿದೆ. ಪ್ರಕಾಶ್ ಕಲಾಲ್ ಬದಶಂಕರ್ (Prakash Kalal Badashankar) ಎಂಬ ಯುವಕ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೇ, ಯುವತಿ ಮೌನವಾಗಿಯೇ ಪ್ರತಿಭಟನೆ ನಡೆಸಿದ್ದಾಳೆ. ಹಾವೇರಿಯ ರಾಣೆಬೆನ್ನೂರಿನಲ್ಲಿ ಇಬ್ಬರೂ ಯಾವುದೇ ಕೋರ್ಸ್ ಗೆ ಸೇರಿದ್ದ ಸಂದರ್ಭದಲ್ಲಿ ಇಬ್ಬರ ಮಧ್ಯೆ ಸ್ನೇಹ ಬೆಸೆದು, ಅದು ಪ್ರೀತಿಯಾಗಿ ಬದಲಾಗಿತ್ತು. ನಂತರ ಇಬ್ಬರೂ ಬೆಂಗಳೂರಿಗೆ ಹೋಗಿ ಸುತ್ತಾಡಿದ್ದಾರೆ. ಅವರ ನಡುವೆ ದೈಹಿಕ ಸಂಬಂಧವೇರ್ಪಟ್ಟಿದೆ. ನಂತರ ಯುವತಿ ಮದುವೆ ಪ್ರಸ್ತಾಪ ಮಾಡಿದಾಗ, ಪ್ರಕಾಶ್, ನಿನ್ನೊಂದಿಗೆ ಟೈಂಪಾಸ್ ಮಾಡಿದ್ದು ಅನ್ನುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಿರುವ ಯುವತಿ, ಮೌನ ಪ್ರತಿಭಟನೆ ನಡೆಸಿದ್ದಾಳೆ.