Lucknow : ಮುಂಬಯಿ ಇಂಡಿಯನ್ಸ್ (Mumbai Indians)ವಿರುದ್ಧ ನಡೆದ ಪಂದ್ಯದಲ್ಲಿ ಮಾರ್ಕಸ್ ಸ್ಟೋಯ್ನಿಸ್ (Marcus Stoinis) ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಗೆಲುವು ಸಾಧಿಸಿ, ಪ್ಲೆ ಆಫ್ ಹಾದಿ ಸುಗಮಗೊಳಿಸಿಕೊಂಡಿದೆ. ಇದರಿಂದಾಗಿ ಪ್ಲೆ ಆಫ್ ಪ್ರವೇಶಿಸುವ ಕನಸು ಕಂಡಿದ್ದ ಆರ್‌ಸಿಬಿಗೆ ಮತ್ತೆ ಸಂಕಷ್ಟ ಶುರುವಾಗಿದೆ.
ಕೊನೆಯ 2 ಓವರ್‌ಗಳಲ್ಲಿ ಮುಂಬೈ ಗೆಲುವಿಗೆ 30 ರನ್ ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲೇ 19ರನ್ ದಾಖಲಾಯಿತು. ಕೊನೆಯ ಓವರ್‌ನಲ್ಲಿ 11 ರನ್ ಗಳು ಬೇಕಿಗಿದ್ದವು. ಟಿಮ್ ಡೇವಿಡ್ ಹಾಗೂ ಕ್ಯಾಮರೂನ್ ಗ್ರೀನ್ ಕಳಪೆ ಪ್ರದರ್ಶನದಿಂದಾಗಿ 5 ರನ್ ಗಳಷ್ಟೇ ಸೇರ್ಪಡೆಯಾಯಿತು. ಕೊನೆಗೆ ಮುಂಬೈ 5 ರನ್ ಗಳಿಂದ ವಿರೋಚಿತ ಸೋಲು ಕಂಡಿತು. 5ನೇ ಸ್ಥಾನದಲ್ಲಿದ್ದ ಆರ್‌ಸಿಬಿ (RCB) ತಂಡಕ್ಕೂ ಲಕ್ನೋ ಗೆಲವು ಸಂಕಷ್ಟ ತಂದಂತಾಗಿದೆ. ಒಂದು ವೇಳೆ ಆರ್‌ಸಿಬಿ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಮುಂಬಯಿ ಮುಂದಿನ ಪಂದ್ಯದಲ್ಲಿ ಸೋತರಷ್ಟೇ ಆರ್‌ಸಿಬಿಗೆ ಪ್ಲೆ ಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿತ್ತು. 178 ರನ್ ಗುರಿ ಪಡೆದ ಮುಂಬಯಿ ತಂಡವು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಬೌಲಿಂಗ್ ಪಿಚ್‌ನಲ್ಲಿ ಇದೇ ಮೊದಲಬಾರಿಗೆ ಇತ್ತಂಡಗಳಿಂದಲೂ ರನ್ ಹೊಳೆ ಹರಿಯಿತು. ಲಕ್ನೋ ಪರ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ (Rohit Sharma), ಇಶಾನ್ ಕಿಶನ್ (Ishan Kishan) ಭರ್ಜರಿ ಸಿಕ್ಸರ್ ಬೌಂಡರಿ ಬ್ಯಾಟಿಂಗ್ ಸಿಡಿಸಿದರು. ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಲಕ್ನೋ ಬೌಲರ್‌ಗಳನ್ನ ಬೆಂಡೆತ್ತಿದರು. ಈ ಜೋಡಿ 9.4 ಓವರ್‌ಗಳಲ್ಲಿ 90 ರನ್ ಸಿಡಿಸಿತ್ತು. ರೋಹಿತ್ ಶರ್ಮಾ 25 ಎಸೆತಗಳಲ್ಲಿ 37 ರನ್ , ಇಶಾನ್ ಕಿಶನ್ 39 ಎಸೆತಗಳಲ್ಲಿ 59 ರನ್ ಸಿಡಿಸಿದರು. ಕಳೆದೆರಡು ಪಂದ್ಯದಲ್ಲಿ ಅಬ್ಬರಿಸಿದ್ದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಸೂರ್ಯಕುಮಾರ್ ಯಾದವ್ 7 ರನ್ ಹಾಗೂ ನಿಹಾಲ್ ವಧೇರಾ 16 ರನ್ ಗಳಿಸಿ ನಿರಾಸೆ ಮೂಡಿಸಿದರು.ಕೊನೆಯ ಓವರ್‌ನಲ್ಲಿ ಡೇವಿಡ್ ಹಾಗೂ ಕ್ಯಾಮರೂನ್ ಗ್ರೀನ್ ಕಳಪೆ ಪ್ರದರ್ಶನದಿಂದ ಮುಂಬೈ ವಿರೋಚಿತ ಸೋಲನುಭವಿಸಿತು. ಟಿಮ್ ಡೇವಿಡ್ 19 ಎಸೆತಗಳಲ್ಲಿ 32 ರನ್ ಗಳಿಸಿದರು. ಲಕ್ನೋ ಪರ ರವಿ ಬಿಷ್ಣೋಯಿ, ಯಶ್ ಠಾಕೂರ್ ತಲಾ 2 ವಿಕೆಟ್ ಉರುಳಿಸಿದರೆ, ಮೊಹ್ಸಿನ್ ಖಾನ್ 1 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ದೀಪಕ್ ಹೂಡ 5 ರನ್, ಕ್ವಿಂಟನ್ ಡಿ ಕಾಕ್ 16 ರನ್ ಹಾಗೂ ಪ್ರೇರಕ್ ಮಂಕಡ್ ಶೂನ್ಯಕ್ಕೆ ಔಟಾಗಿದ್ದರು. ಬ ನಾಯಕ ಕೃನಾಲ್ ಪಾಂಡ್ಯ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಜೋಡಿ 59 ಎಸೆತಗಳಲ್ಲಿ 82 ರನ್ ಸಿಡಿಸಿತ್ತು. ನಂತರದಲ್ಲಿ ನಿಕೋಲಸ್ ಪೂರನ್ ಹಾಗೂ ಸ್ಟೋಯ್ನಿಸ್ ಜೋಡಿ 24 ಎಸೆತಗಳಲ್ಲಿ 60 ರನ್ ಬಾರಿಸಿತು. ಕೊನೆಯವರೆಗೂ ಅಜೇಯರಾಗಿ ಹೋರಾಡಿದ ಸ್ಟೋಯ್ನಿಸ್ 47 ಎಸೆತಗಳಲ್ಲಿ 89 ರನ್, ಕೃನಾಲ್ ಪಾಂಡ್ಯ 42 ಎಸೆತಗಳಲ್ಲಿ 49 ರನ್ ಗಳಿಸಿದರು. ನಿಕೋಲಸ್ ಪೂರನ್ 8 ರನ್ ಗಳಿಸಿ ಅಜೇಯರಾಗುಳಿದರು. ಮುಂಬಯಿ ಪರ ಜೇಸನ್ ಬೆಹ್ರೆನ್‌ಡ್ರೋಫ್ 2, ಪಿಯೂಷ್ ಚಾವ್ಲಾ 1 ವಿಕೆಟ್ ಪಡೆದರು.