Bangalore : ಕಾಂಗ್ರೆಸ್ ನಲ್ಲಿ ಕೊನೆಗೂ ಸಿಎಂ (CM) ಕುರ್ಚಿಗಾಗಿ ನಡೆದ ಫೈಟ್ ಅಂತ್ಯವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) 2ನೇ ಬಾರಿಗೆ ಅಧಿಕಾರ ಸ್ವೀಕರಿಸಲು ಮುಂದಾಗಿದ್ದು, ಡಿ.ಕೆ. ಶಿವಕುಮಾರ್ (DK Shivakumar) ಡಿಸಿಎಂ (DCM) ಆಗಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನೂತನ ಸಿಎಂ ಹಾಗೂ ಡಿಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನದಲ್ಲಿಯೂ ಭರ್ಜರಿ ಶಕ್ತಿ ಪ್ರದರ್ಶನ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಕಂಠೀರವ ಸ್ಟೇಡಿಯಂ ಬಳಿ ಸಿಎಂ ಸಿದ್ದರಾಮಯ್ಯ ಅವರ ಫ್ಲೆಕ್ಸ್‌ಗಳು ಈಗಾಗಲೇ ರಾರಾಜಿಸುತ್ತಿವೆ. 2ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಸಿದ್ದರಾಮಯ್ಯಗೆ ಶುಭಾಶಯಗಳು ಎಂದು ಫ್ಲೆಕ್ಸ್ ಗಳ ರಾರಾಜಿಸುತ್ತಿವೆ. ಶನಿವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಭಿಮಾನಿಗಳು, ಕಾರ್ಯಕರ್ತರು ಸೇರಿ ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.