Kornersite

Bengaluru Just In Karnataka Politics State

ಯಾರಾಗಲಿದ್ದಾರೆ ಸಚಿವರು! ಸಿದ್ದು, ಡಿಕೆಶಿ ಬಣದಲ್ಲಿ ಯಾರಿದ್ದಾರೆ?

Bangalore : ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಇದರ ಬೆನ್ನಲ್ಲಿಯೇ ಸಿಎಂ ಹಾಗೂ ಡಿಸಿಎಂ ಸ್ಥಾನಗಳನ್ನು ಕೂಡ ಹೈಕಮಾಂಡ್ ಫೈನಲ್ ಮಾಡಿದೆ. ಆದರೆ, ಈಗ ಸಚಿವರು ಯಾರಾಗಬಹುದು ಎಂಬ ಚರ್ಚೆ ಶುರುವಾಗಿದೆ. ಸದ್ಯ ಸಿದ್ದು ಹಾಗೂ ಡಿಕೆಶಿ ತಮ್ಮ ತಮ್ಮ ಬೆಂಬಲಿಗರಿಗೆ ಅವಕಾಶ ನೀಡಲು ಪ್ರಯತ್ನಿಸುತ್ತಿದ್ದಾರೆ.

ಅಲ್ಲದೇ, ಈ ಬಾರಿ ಹಿರಿಯ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಈ ನಿಟ್ಟಿನಲ್ಲಿ ಯಾರಿಗೆ ಸಚಿವ ಸ್ಥಾನಗಳು ಸಿಗಬಹುದು ಎಂಬ ಚರ್ಚೆ ಶುರುವಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಒಂದೇ ಡಿಸಿಎಂ ಸ್ಥಾನ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಸದ್ಯ ಸಚಿವ ಸ್ಥಾನಕ್ಕಾಗಿ ಡಿ ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಬಣದ ನಡುವೆ ಫೈಟ್ ಶುರುವಾಗಿದೆ. ಹಲವಾರು ನಾಯಕರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ತಮ್ಮ ನಾಯಕಿನಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಈ ಬಾರಿ ಸಿದ್ದು ಬಣದ ಹಲವರಿಗೆ ಹಾಗೂ ಡಿಕೆಶಿ ಬಣದ ಹಲವರಿಗೆ ಸಚಿವ ಸ್ಥಾನ ನೀಡಲಾಗುವುದು.

ಸಿದ್ದರಾಮಯ್ಯ ಬಣದಲ್ಲಿ ಬಸವರಾಜ ರಾಯರೆಡ್ಡಿ, ಕೆ.ಜೆ ಜಾರ್ಜ್, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಎಂ.ಬಿ ಪಾಟೀಲ್, ಈ ತುಕರಾಂ, ರಹೀಮ್ ಖಾನ್, ರಾಘವೇಂದ್ರ ಹಿಟ್ನಾಳ್, ಎಸ್. ಎಸ್ ಮಲ್ಲಿಕಾರ್ಜುನ, ಶಿವಲಿಂಗೇಗೌಡ, ಟಿ.ಬಿ ಜಯಚಂದ್ರ, ಈಶ್ವರ ಖಂಡ್ರೆ, ಅಜಯ್ ಸಿಂಗ್, ಸತೀಶ್ ಜಾರಕಿಹೊಳಿ, ಕೃಷ್ಣಭರೇಗೌಡ, ವಿನಯ್ ಕುಲಕರ್ಣಿ, ಯು.ಟಿ ಖಾದರ್, ಡಾ ಎಚ್ ಸಿ ಮಹದೇವಪ್ಪ ಹೆಸರು ಮುಂಚೂಣಿಯಲ್ಲಿವೆ.
ಡಿ.ಕೆ ಶಿವಕುಮಾರ್ ಬಣದಲ್ಲಿ ಕುಣಿಗಲ್ ರಂಗನಾಥ್, ಎಸ್‌ ರವಿ, ಲಕ್ಷ್ಮೀ ಹೆಬ್ಬಾಳ್ಕರ್, ತನ್ವೀರ್ ಸೇಠ್, ಮಧು ಬಂಗಾರಪ್ಪ ಸೇರಿ ಕೇಳಿ ಬರುತ್ತಿವೆ. ಇನ್ನೂ ಇದನ್ನು ಮೀರಿ ಹೈಕಮಾಂಡ್ ಕೆಲವರಿಗೆ ಸಚಿವ ಸ್ಥಾನ ನೀಡುವಂತೆ ಸೂಚಿಸಬಹುದು. ಬಿ.ಕೆ ಹರಿಪ್ರಸಾದ್, ಡಾ.ಜಿ ಪರಮೇಶ್ವರ್, ಕೆ.ಎಚ್ ಮುನಿಯಪ್ಪ, ಪ್ರಿಯಾಂಕಾ ಖರ್ಗೆ, ರಾಮಲಿಂಗರೆಡ್ಡಿ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಹೆಸರನ್ನು ಹೈಕಮಾಂಡ್ ಸೂಚಿಸಬಹುದು.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು