ಟೋಕಿಯೊ: ಭಾರತವು ನೆರೆಯ ಪಾಕಿಸ್ತಾನದೊಂದಿಗೆ (Pakistan) ಸಾಮಾನ್ಯ ಸಂಬಂಧ ಬಯಸುತ್ತದೆ. ಆದರೆ, ಆದರೆ ಭಯೋತ್ಪಾದನೆಯಿಂದ ಮುಕ್ತವಾದ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಇಸ್ಲಾಮಾಬಾದ್‌ನ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಭಯೋತ್ಪಾದನೆ ಮತ್ತು ಹಗೆತನದಿಂದ ಮುಕ್ತವಾದ ಅನುಕೂಲಕರ ವಾತಾವರಣ ಸೃಷ್ಟಿಸುವುದು ಅವರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಹೇಳಿದ್ದಾರೆ.
ಉಕ್ರೇನ್‌ನ ಮೇಲಿನ ಆಕ್ರಮಣಕ್ಕಾಗಿ ದೀರ್ಘಕಾಲದ ಮಿಲಿಟರಿ ಪಾಲುದಾರ ರಷ್ಯಾವನ್ನು ಭಾರತ ಸ್ಪಷ್ಟವಾಗಿ ಖಂಡಿಸಿಲ್ಲ. ಮೋದಿ ಪದೇ ಪದೇ ಶಾಂತಿಗಾಗಿ ಕರೆ ನೀಡುತ್ತಿರುವಾಗ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಂದೆಯೇ ಇಂದಿನ ಯುಗ ಯುದ್ಧದ ಯುಗವಲ್ಲ ಎಂದು ಹೇಳಿದ್ದರೂ ಭಾರತವು ರಷ್ಯಾದೊಂದಿಗೆ ಚುರುಕಾದ ವ್ಯವಹಾರವನ್ನು ಮುಂದುವರೆಸಿದೆ. ಭಾರತವು ಮಧ್ಯವರ್ತಿ ಪಾತ್ರವನ್ನು ವಹಿಸಬಹುದೇ ಎಂಬ ಪ್ರಶ್ನೆಗೆ, ಉಕ್ರೇನ್ ಸಂಘರ್ಷದ ಬಗ್ಗೆ ತಮ್ಮ ದೇಶದ ನಿಲುವು ಸ್ಪಷ್ಟ ಮತ್ತು ಅಚಲವಾಗಿದೆ ಎಂದು ಹೇಳಿದ್ದಾರೆ.