Kornersite

Crime Just In National

Crime News: ಸಹಪಾಠಿ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಗುಂಡು ಹಾರಿಸಿದ ವಿದ್ಯಾರ್ಥಿ!

ವಿದ್ಯಾರ್ಥಿಯೊಬ್ಬಾತ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ನಂತರ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಗ್ರೇಟರ್ ನೋಯ್ಡಾದ (Greater Noida) ಶಿವ ನಾಡರ್ ವಿಶ್ವವಿದ್ಯಾಲಯದಲ್ಲಿ (Shiv Nadar University) ನಡೆದಿದೆ.

ಸದ್ಯದ ಮಾಹಿತಿಯಂತೆ, ಮೃತ ವಿದ್ಯಾರ್ಥಿನಿಯು ಕಾನ್ಪುರದ ನಿವಾಸಿ ಎಂದು ಹೇಳಲಾಗಿದೆ. ಹತ್ಯೆ ಮಾಡಿದ ವಿದ್ಯಾರ್ಥಿಯನ್ನು ಅಮ್ರೋಹಾ ಮೂಲದವನು ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯ ಕೊಲೆಗೆ ಕಾರಣ ಅಧಿಕೃತವಾಗಿ ತಿಳಿದು ಬಂದಿಲ್ಲ. ಆದರೆ, ಪ್ರೇಮ ವೈಫಲ್ಯದಿಂದ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಆರೋಪಿ ವಿದ್ಯಾರ್ಥಿ ಮತ್ತು ಮೃತ ವಿದ್ಯಾರ್ಥಿನಿ ಗ್ರೇಟರ್ ನೋಯ್ಡಾದಲ್ಲಿರುವ ಶಿವ ನಾಡರ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. ಇಬ್ಬರೂ ಬಿಎ ಸಮಾಜಶಾಸ್ತ್ರದ ಮೂರನೇ ವರ್ಷ ಓದುತ್ತಿದ್ದರು. ಇಬ್ಬರ ನಡುವೆ ಕೆಲ ಕಾಲ ವಾಗ್ವಾದ ನಡೆದಿತ್ತು. ನಂತರ ವಿಶ್ವವಿದ್ಯಾಲಯದ ಡೈನಿಂಗ್‌ ಹಾಲ್‌ನಲ್ಲಿ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದ ವಿದ್ಯಾರ್ಥಿ ಅಲ್ಲಿಂದ ಬಾಲಕರ ವಸತಿ ನಿಲಯಕ್ಕೆ ಓಡಿಹೋಗಿದ್ದಾನೆ. ಅಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ದಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ