Kornersite

International Just In

ಭೂಮಿಯಂತಹ ಮತ್ತೊಂದು ಗ್ರಹ ಪತ್ತೆ; ಎಲ್ ಪಿ 791-18 ಡಿ ಎಂದು ನಾಮಕರಣ!

ಭೂಮಿಯ ಗಾತ್ರದಷ್ಟೇ ಇರುವ ಮತ್ತೊಂದು ಗ್ರಹವನ್ನು ಖಗೋಳಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.
ಇದಕ್ಕೆ “ಎಲ್‌ಪಿ 791-18ಡಿ” ಎಂದು ಹೆಸರಿಟ್ಟಿದ್ದಾರೆ.


ಈ ಗ್ರಹವು ಜ್ವಾಲಾಮುಖೀಗಳಿಂದ ಕೂಡಿದ್ದು, ಇಲ್ಲಿ ಮಾನವರು ಜೀವನ ನಡೆಸಲು ಅನುಕೂಲವಾಗಿರುವ ವಾತಾವರಣ ಇದೆ ಎಂದು ಖಗೋಳ ಶಾಸ್ತ್ರಜ್ಞರು ಊಹಿಸಿದ್ದಾರೆ. ಈ ಗ್ರಹವು ತನ್ನಿಂದ 90 ಜ್ಯೋತಿರ್ವರ್ಷ ದೂರವಿರುವ ಕೆಂಪು ಕುಬ್ಜ ನಕ್ಷತ್ರ ಸುತ್ತುತ್ತಿದೆ. ಈ ನಕ್ಷತ್ರದ ಹೆಸರು “ಕ್ರೇಟರ್‌”. ಈ ಗ್ರಹದಲ್ಲಿ ಜ್ವಾಲಾಮುಖೀಗಳು ಸ್ಫೋಟಗೊಳ್ಳುತ್ತಿವೆ ಎಂದು ಅಮೆರಿಕದ ಹಾರ್ವರ್ಡ್‌ ವಿವಿ ಮತ್ತು ಸ್ಮಿತ್‌ಸೋನಿಯನ್‌ ಸಂಸ್ಥೆಯ ಖಗೋಳ ಭೌತಶಾಸ್ತ್ರ ವಿಭಾಗದ ಸಂಶೋಧಕರ ತಂಡ ಹೇಳಿದೆ.

ಅಮೆರಿಕದ ನಾಸಾದ ಟ್ರಾನ್ಸಿಟಿಂಗ್‌ ಎಕ್ಸೋಪ್ಲಾನೆಟ್‌ ಸರ್ವೆ ಸ್ಯಾಟಲೈಟ್‌(ಟಿಇಎಸ್‌ಎಸ್‌) ಮತ್ತು ಸ್ಪಿಟ್ಜರ್‌ ಬಾಹ್ಯಾಕಾಶ ದೂರದರ್ಶಕ ಬಳಸಿ ಖಗೋಳಶಾಸ್ತ್ರಜ್ಞರು ಈ ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನಾತ್ಮಕ ಅಧ್ಯಯನವನ್ನು “ನೇಚರ್‌’ ನಿಯತಕಾಲಿಕೆಯಲ್ಲಿ ತಿಳಿಸಿದ್ದಾರೆ.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ