ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ರಚಿಸಲು ಮುಂದಾಗಿರುವ ಕಾಂಗ್ರೆಸ್ ತಾನು ಗ್ಯಾರಂಟಿ ನೀಡಿದಂತೆ ಮಹಿಳೆಯರಿಗೆ ಸಂಪೂರ್ಣವಾಗಿ ಉಚಿತ ಬಸ್ ಸೇವೆ ಒದಗಿಸಬೇಕು. ಯಾವುದೇ ಷರತ್ತು ಹಾಕುವುದು ಬೇಡ ಎಂದು ಮಹಿಳೆಯರು ಮನವಿ ಮಾಡುತ್ತಿದ್ದಾರೆ.
ಕಾಂಗ್ರೆಸ್ (Congress) ಪಕ್ಷವು ಯಾವುದೇ ಷರತ್ತು ಹಾಕದೆ ವಿವಿಧ ಉಚಿತ ಘೋಷಣೆಗಳನ್ನು ಮಾಡಿತ್ತು. ಈಗ ಉಚಿತ ಭಾಗ್ಯಗಳಿಗೆ ಷರತ್ತು ವಿಧಿಸುವ ಮಾತುಗಳು ಕೇಳಿಬರಲಾರಂಭಿಸಿವೆ. ಹೀಗಾಗಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಹೀಗಾಗಿ ನಾವು ವಿದ್ಯುತ್ ಕಟ್ಟುವುದಿಲ್ಲ ಎಂದು ಜನರು ಈಗಾಗಲೇ ಹೇಳುತ್ತಿದ್ದಾರೆ. ಇದರೊಂದಿಗೆ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕೆ (Free bus travel for Women) ಷರತ್ತು ವಿಧಿಸದಂತೆ ಮನವಿ ಮಾಡಿದ್ದಾರೆ.
ಸಾವಿರ ನಿಯಮ ಜಾರಿಗೊಳಿಸದಂತೆ ಮನವಿ ಮಾಡಿದ್ದಾರೆ. ಇಷ್ಟು ಕಿಲೋ ಮೀಟರ್ ವರೆಗೆ ಮಾತ್ರ ಉಚಿತ ಬಸ್ ಪ್ರಯಾಣ, ಇದೇ ಜಾಗದಲ್ಲಿ ಬಸ್ ಹತ್ತಿದರೆ ಮಾತ್ರ ಉಚಿತ ಪ್ರಯಾಣ ಸೇರಿದಂತೆ ಕಷ್ಟದ ಕಂಡೀಷನ್ ಹಾಕುವುದು ಬೇಡ ಎಂದು ಮನವಿ ಮಾಡಿದ್ದಾರೆ.
Free Bus: ಉಚಿತ ಬಸ್ ಭಾಗ್ಯಕ್ಕೆ ಯಾವುದೇ ಕಡಿವಾಣ ಬೇಡ; ಮಹಿಳೆಯರ ಆಗ್ರಹ
