ವ್ಯಕ್ತಿಯೊಬ್ಬರು ಹೋಟೆಲ್ ನಲ್ಲಿ ಚಹಾ (Tea) ಕುಡಿಯುತ್ತಿದ್ದ ಸಂದರ್ಭದಲ್ಲಿ ಶರ್ಟ್ ಜೇಬಿನಲ್ಲಿದ್ದ ಮೊಬೈಲ್ (Mobile Blast) ಏಕಾಏಕಿ ಬ್ಲಾಸ್ಟ್ ಆದ ಘಟನೆ ಕೇರಳ (Kerala) ದಲ್ಲಿ ನಡೆದಿದೆ.
ಈ ಘಟನೆ ಮರೋಟಿಚಾಲ್ ಎಂಬಲ್ಲಿ ನಡೆದಿದೆ. 70 ವರ್ಷದ ಇಲಿಯಾಸ್ ಎಂಬವರು ಹೋಟೆಲಿನಲ್ಲಿ ತಮ್ಮ ಪಾಡಿಗೆ ಟೀ ಕುಡಿಯುತ್ತಾ ಕುಳಿತಿದ್ದರು. ಈ ಸಂದರ್ಭದಲ್ಲಿ ಅವರ ಕಿಸೆಯಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದೆ. ಕೂಡಲೇ ಅವರ ಶರ್ಟ್ ಗೆ ಬೆಂಕಿ ಹೊತ್ತಿಕೊಂಡಿದೆ. ಆಗ ಇಲಿಯಾಸ್ ಕಿಸೆಯಲ್ಲಿದ್ದ ಮೊಬೈಲ್ ಬಿಸಾಕಿದ್ದಾರೆ. ಅಲ್ಲದೆ ಹೋಟೆಲ್ ಸಿಬ್ಬಂದಿ ಕೂಡ ಅವರ ರಕ್ಷಣೆಗೆ ಆಗಮಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಬ್ಯಾಟರಿ (Battery) ಯೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂಬುದಾಗಿ ಶಂಕಿಸಲಾಗಿದೆ.
ಸ್ಫೋಟಗೊಂಡಿದ್ದು ಯಾವ ಕಂಪನಿಯ ಫೋನ್ ಎಂಬುವುದು ತಿಳಿದು ಬಂದಿಲ್ಲ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ಕಂಡು ಜನರು ಮೊಬೈಲ್ ನ್ನು ದೂರವೇ ಇಡುತ್ತಿದ್ದಾರೆ.