Kornersite

Just In Sports

Troll: ಕೊಹ್ಲಿ ಭರ್ಜರಿ ಶತಕ; ಟ್ರೋಲ್ ಆಗುತ್ತಿರುವ ಗಂಭೀರ್, ನವೀನ್!

ವಿರಾಟ್ ಕೊಹ್ಲಿ ಅಬ್ಬರದ ಶತಕ ಸಿಡಿಸಿ, ಹೈದರಾಬಾದ್ ವಿರುದ್ಧ 8ವಿಕೆಟ್ ಗಳ ಗೆಲು ತಂದು ಕೊಟ್ಟರು. ಈ ಮೂಲಕ ತಂಡದ ಪ್ಲೇ ಆಫ್ ಆಸೆ ಜೀವಂತವಾಗಿದೆ. ಕೊಹ್ಲಿ ಶತಕ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಬಿರುಸಿನ ಅರ್ಧ ಶತಕದ ನೆರವಿನಿಂದ ಆರ್ ಸಿಬಿ ನಿರ್ಣಾಯಕ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಗೆಲುವಿನ ಬೆನ್ನಲ್ಲಿಯೇ ಲಕ್ನೋ ತಂಡದ ಆಟಗಾರ ಅಪ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಹಾಗೂ ಮೆಂಟರ್ ಗೌತಮ್ ಗಂಭೀರ್ ಭಾರೀ ಟ್ರೋಲ್ ಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಲಕ್ನೋ ವಿರುದ್ಧದ ಪಂದ್ಯದ ನಂತರ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೇ, ಪಂದ್ಯದ ವೇಳೆಯೂ ಮೈದಾನದಲ್ಲಿ ವಿರಾಟ್ ಹಾಗೂ ನವೀನ್ ಉಲ್ ಹಕ್ ಮಾತಿನ ಚಕಮಕಿ ನಡೆಸಿದ್ದರು. ಇದಾದ ನಂತರ ಎಲ್ಲ ಮೂವರೂ ಆಟಗಾರರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿತ್ತು. ಈ ಪಂದ್ಯದುದ್ದಕ್ಕೂ ಮೈದಾನದಲ್ಲಿ ಅಬ್ಬರದ ಸಂಭ್ರಮಾಚರಣೆ ತೋರಿದ್ದ ಕೊಹ್ಲಿ ಲಕ್ನೋ ಮೈದಾನದ ಕೇಂದ್ರ ಬಿಂದುವಾಗಿದ್ದರು.

ಇದರ ಬೆನ್ನಲ್ಲಿಯೇ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ವೊಂದರ ಮೂಲಕ ಗಮನ ಸೆಳೆದಿದ್ದ ಉಲ್ ಹಕ್ ಪರೋಕ್ಷವಾಗಿ ಕೊಹ್ಲಿ ಹಾಗೂ ಆರ್ ಸಿಬಿ ಅಭಿಮಾನಿಗಳ ಕಾಲೆಳೆದಿದ್ದರು. ಆರ್ ಸಿಬಿ ಹಾಗೂ ಮುಂಬಯಿ ಪಂದ್ಯ ನಡೆಯುತ್ತಿದ್ದ ಟಿವಿ ಪರದೆಯ ಮುಂದೆ ಮಾವಿನ ಹಣ್ಣುಗಳನ್ನು ಇಟ್ಟ ಫೋಟೋ ಹಂಚಿಕೊಂಡಿದ್ದ ಹಕ್, ಸಿಹಿ ಮಾವಿನ ಹಣ್ಣುಗಳು ಎಂದು ಬರೆದುಕೊಂಡಿದ್ದರು. ಇದನ್ನೇ ಗುರಿಯಾಗಿಸಿಕೊಂಡಿರುವ ಆರ್ ಸಿಬಿ ಅಭಿಮಾನಿಗಳು ನಿನ್ನೆ ಹೈದರಾಬಾದ್ ವಿರುದ್ಧ ಬೆಂಗಳೂರು ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲಾತಾಣಗಳಲ್ಲಿಭಾರೀ ಟ್ರೋಲ್ ಮಾಡಿದ್ದಾರೆ. ತರಹೇವಾರಿ ಮೀಮ್ಸ್ ಗಳ ಮೂಲಕ ಟ್ವೀಟ್ ಗಳೊಂದಿಗೆ ಗಂಭೀರ್ ಹಗೂ ನವೀನ್ ಉಲ್ ಹಕ್ ಕಾಲೆಳೆದಿದ್ದಾರೆ.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್