ಬೆಂಗಳೂರು : ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಸತತ ಇಳಿಕೆ ಕಂಡು ಬರುತ್ತಿದ್ದು, ಗ್ರಾಹಕರಿಗೆ ಫುಲ್ ಖುಷಿಯಾಗುತ್ತಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂ.ನಷ್ಟು ಕುಸಿತ ಕಂಡಿದೆ. ಕಳೆದ ಹಲವು ದಿನಗಳಿಂದಲೂ ಬೆಳ್ಳಿ ಹಾಗೂ ಚಿನ್ನದ ದರದ ಇಳಿಕೆ ಕಂಡು ಬರುತ್ತಿದೆ.
10 ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 900 ರೂ.ನಷ್ಟು ಇಳಿದಿದೆ. ಬೆಳ್ಳಿ ಬೆಲೆಯೂ 10 ದಿನಗಳಲ್ಲಿ ಏರಿಕೆಯಾಗಿದ್ದು ಒಮ್ಮೆ ಮಾತ್ರ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,800 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,870 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,430 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,850 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 7,800 ರೂ. ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 20ಕ್ಕೆ):
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 55,800 ರೂ
24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 60,870 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 743 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,830 ರಿಂಗಿಟ್ (51,603 ರುಪಾಯಿ)
ದುಬೈ: 2205 ಡಿರಾಮ್ (49,692 ರುಪಾಯಿ)
ಅಮೆರಿಕ: 600 ಡಾಲರ್ (49,641 ರುಪಾಯಿ)
ಸಿಂಗಾಪುರ: 822 ಸಿಂಗಾಪುರ್ ಡಾಲರ್ (50,580 ರುಪಾಯಿ)
ಕತಾರ್: 2,260 ಕತಾರಿ ರಿಯಾಲ್ (51,372 ರೂ)
ಓಮನ್: 240 ಒಮಾನಿ ರಿಯಾಲ್ (51,588 ರುಪಾಯಿ)
ಕುವೇತ್: 187.50 ಕುವೇತಿ ದಿನಾರ್ (50,498 ರುಪಾಯಿ)