Kornersite

Bengaluru Just In Karnataka Politics State

MB Patil: ಚಿಕ್ಕ ವಯಸ್ಸಿನಲ್ಲಿಯೇ ವಿಧಾನಸಭೆ ಪ್ರವೇಶಿಸಿದ ನಾಯಕನಿಗೆ ಸಚಿವ ಸ್ಥಾನ

ವಿಜಯಪುರ: ಅತೀ ಚಿಕ್ಕ ವಯಸ್ಸಿನಲ್ಲಿಯೇ ಲಿಂಗಾಯತ ಸಮುದಾಯದ ಪ್ರಭಲ ನಾಯಕ ಎಂ.ಬಿ ಪಾಟೀಲ್‌ (M B Patil) ವಿಧಾನಸಭೆ ಪ್ರವೇಶಿಸಿದ್ದರು.

ಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕ, ಜಲಸಂಪನ್ಮೂಲ ಸಚಿವರಾಗಿ ಈ ಹಿಂದೆ ಅಧಿಕಾರ ಅನುಭವಿಸಿದ್ದಾರೆ. ಈಗ ಅವರು, ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸಚಿವ ಸ್ಥಾನ ಅಲಂಕರಿಸಿದ್ದಾರೆ. 1964 ಅಕ್ಟೋಬರ್ 7 ರಂದು ಜನಿಸಿದ ಇವರು ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬದವರು. ತಂದೆ ಬಿ.ಎಂ ಪಾಟೀಲ್‌ ಕೂಡ ಶಾಸಕರಾಗಿದ್ದವರು.

ಬಿಇ ಸಿವಿಲ್ ಇಂಜಿನೀಯರಿಂಗ್ ವ್ಯಾಸಂಗ ಮಾಡಿರುವ ಎಂ.ಬಿ. ಪಾಟೀಲ್, ಅವರ ತಂದೆ ಬಿ.ಎಂ ಪಾಟೀಲ್ ನಿಧನರಾದ ನಂತರ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದವರು. ಅವರ ತಂದೆಯ ಸಾವಿನ ನಂತರ 1992 ರಲ್ಲಿ ತಿಕೋಟಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲ್ಲುವ ಮುಖಾಂತರ 26 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು. 1998 ರಲ್ಲಿ ವಿಜಯಪುರ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ 2004 ರಲ್ಲಿ ತಿಕೋಟಾ ಕ್ಷೇತ್ರದಿಂದ ಶಾಸಕರಾಗಿ ಗೆದ್ದರು. 2008, 2013, 2018, 2023 ರಲ್ಲಿ ಸತತ ನಾಲ್ಕು ಬಾರಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎಂ ಬಿ ಪಾಟೀಲ್, 2018 ರಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕೆಲ ತಿಂಗಳುಗಳ ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು