ಬೆಂಗಳೂರಲ್ಲಿ ಸುರಿದ ಮಹಾ ಮಳೆಗೆ ಯುವತಿ ಸಾವನ್ನಪ್ಪಿದ್ದಾಳೆ. 22 ವರ್ಷದ ಭಾನುರೇಖಾ ಸಾವನ್ನಪ್ಪಿದ ಯುವತಿ. ವಿಧಾನಸೌಧದಿಂದ 200 ಮೀಟರ್ ದೂರದಲ್ಲಿ ಇರುವ ಕೆ. ಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಕಾರು ಸಿಲುಕೊಂಡಿತ್ತು. ಅಂಡರ್ ಪಾಸ್ ಪೂರ್ತಿ ಮಳೆ ನೀರು ನಿಂತು ಭರ್ತಿಯಾಗಿದೆ. ಕಾರು ಸಿಲುಕಿದ ಪರಿಣಾಮ ಭಾನು ರೇಖಾಳನ್ನ ಕೂಡಲೇ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಲಿಲ್ಲ. ಕೂಡಲೇ ಸಿಎಂ ಸಿದ್ದರಾಮಯ್ಯ್ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಭಾನುರೇಖಾ ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮೂಲತಹ ಆಂಧ್ರದವಳಾದ ಭಾನುರೇಖಾ ತನ್ನ ಫ್ಯಾಮಿಲಿಯನ್ನ ಬರಲು ಹೇಳಿದ್ದಳು. ಅವರನ್ನೆಲ್ಲ್ ಕರೆದುಕೊಂಡು ಬೆಂಗಳೂರು ತೊರಿಸಲು ಹೋರಟಿದ್ದಾಳೆ. ಬೆಳಗ್ಗೆ ಹಲವಾರು ಸ್ಥಳಗಳನ್ನು ನೋಡಿದ್ದಾರೆ. ಇನ್ನೆನು ಮಳೆ ಶುರು ಆಯಿತು ಊರ ಕಡೆಗೆ ಹೊರಟರಾಯ್ತು ಎಂದು ಹೋರಟಿದ್ದಾಗೆ ಈ ಘಟನೆ ನಡೆದಿದೆ.
ಅಂಡರ್ ಪಾಸ್ ನಲ್ಲಿ ಕಾರು ಸಿಲುಕಿಕೊಂಡಾಗ ಒಳಗಿದ್ದವರು ಕಿರುಚಲು ಶುರು ಮಡಿದ್ದಾರೆ. ಸ್ಥಳೀಯರು ರಕ್ಷಿಸಲು ಪ್ರಯತ್ನ ಮಾಡಿದ್ದಾರೆ. ಕಾರಿನಲ್ಲಿ ಆರು ಜನ ಇದ್ದರು ಎನ್ನಲಾಗಿದೆ. ಕೂಡಲೇ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಹಾಯದಿಂದ ಕುಟುಂಬದವರ ರಕ್ಷಣೆಯಾಗಿದೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಭಾನುರೇಖಾಳನ್ನ ಹತ್ತಿರದಲ್ಲೇ ಇದ್ದ ಸೈಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಭಾನುರೇಖಾ ಮಾತ್ರ ಬದುಕುಳಿಯಲಿಲ್ಲ.
ಅರ್ಧ ಗಂಟೆಯಾಅರು ಚಿಕಿತ್ಸೆ ಮಾಡದೇ ಆಸ್ಪತ್ರೆಯವರು ನಿರ್ಲಕ್ಷ ತೋರಿದ್ದಾರೆ ಅನ್ನೋದು ಕುಟುಂಬಸ್ಥರ ಅಳಲು. ಕೂಡಲೇ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೇ ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೂಡ ಘೋಷಿಸಿದ್ದಾರೆ.