Lucknow : ಕೆಕೆಆರ್ ತನ್ನ ಹೋರಾಟ ಅಂತ್ಯಗೊಳಿಸಿದ್ದು, ಗೆಲುವಿನ ಮೂಲಕ ಲಕ್ನೋ ತಂಡವು ಪ್ಲೇ ಆಫ್ ಹಂತಕ್ಕೆ ಪ್ರವೇಶ ಮಾಡಿದೆ. ಕೊನೆಯ ಓವರ್ ನಲ್ಲಿ ರಿಂಕು ಸಿಂಗ್ ಉತ್ತಮ ಹೋರಾಟದ ಹೊರತಾಗಿಯೂ ಹೊರತಾಗಿಯೂ ಲಕ್ನೋ ತಂಡವು ಕೆಕೆಆರ್ ವಿರುದ್ಧ 1 ರನ್ ರೋಚಕ ಜಯ ಸಾಧಿಸಿದೆ.
ಈ ಗೆಲುವಿನ ಮೂಲಕ 14 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು +0284 ರನ್ ರೇಟ್ ನೊಂದಿಗೆ 17 ಅಂಕ ಪಡೆದು 3ನೇ ಸ್ಥಾನ ಪಡೆದಿದೆ. ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ 1 ರನ್ ನಿಂದ ವಿರೋಚಿತ ಸೋಲು ಕಂಡಿತು. ಮೊದಲ ವಿಕೆಟ್ ಪತನಕ್ಕೆ ಜೇಸನ್ ರಾಯ್, ವೆಂಕಟೇಶ್ ಅಯ್ಯರ್ ಜೋಡಿ 5.5 ಓವರ್‌ಗಳಲ್ಲಿ 61 ರನ್ ಕಲೆಹಾಕಿತ್ತು. ಅಯ್ಯರ್ 24 ರನ್, ಜೇಸನ್ ರಾಯ್ 28 ಎಸೆತಗಳಲ್ಲಿ 45 ರನ್ ಗಳಿಸಿದರು. ಬಳಿಕ ನಿತೀಶ್ ರಾಣಾ, ರಹ್ಮದ್ದುಲ್ಲಾ ಗುರ್ಭಜ್ 10 ರನ್, ರಸ್ಸೆಲ್ 7 ರನ್ ಗಳಿಸಿ ಕೈಚೆಲ್ಲಿದರು. ಕೊನೆಯಲ್ಲಿ ರಿಂಕು ಸಿಂಗ್ ಹೋರಾಟ ಅರ್ಧ ಶತಕದ ಹೋರಾಟ ನಡೆಸಿದರೂ ತಂಡ ವಿರೋಚಿತ ಸೋಲಿಗೆ ಗುರಿಯಾಯಿತು. ರಿಂಕು ಸಿಂಗ್ 33 ಎಸೆತಗಳಲ್ಲಿ ಭರ್ಜರಿ 67 ರನ್ ಸಿಡಿಸಿ ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ಆರಂಭದಲ್ಲಿಯೇ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ಕ್ವಿಂಟನ್ ಡಿ ಕಾಕ್ 28 ರನ್, ಪ್ರೇರಕ್ ಮಂಕದ್ 26 ರನ್ ಆರಂಭದಲ್ಲಿ ತಂಡವು ನಿಧಾನಗತಿಯ ರನ್ ಕಲೆ ಹಾಕಿತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಿಕೋಲಸ್ ಪೂರನ್ ಭರ್ಜರಿ ಅರ್ಧಶತಕದ ಬ್ಯಾಟಿಂಗ್‌ನಿಂದ ತಂಡ 170ರ ಗಡಿ ದಾಟಿತು. ಲಕ್ನೋ ತಂಡದ ಪರ ಡಿಕಾಕ್ 28 ರನ್, ಮಂಕದ್ 26 ರನ್, ಆಯುಷ್ ಬದೋನಿ 25 ರನ್ ಗಳಿಸಿದರೆ ನಿಕೋಲಸ್ ಪೂರನ್ 58 ರನ್ ಸಿಡಿಸಿದರು. ವೈಭವ್ ಅರೋರಾ, ಶಾರ್ದೂಲ್ ಠಾಕೂರ್, ಸುನೀಲ್ ನರೇನ್ ತಲಾ 2 ವಿಕೆಟ್ ಕಿತ್ತರೆ, ಪರ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದು ಪಡೆದರು.