ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ಮತ್ತೊಂದು ಮಹತ್ವದ ನಿರ್ಧಾರ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಈ ನಿರ್ಧಾರದಿಂದ ನನಗೆ ಜೀರೋ ಟ್ರಾಫಿಕ್ ಬೇಡ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಹೋಗುವ ಮಾರ್ಗದಲ್ಲಿ ಸುಮಾರು 20 ನಿಮಿಷ ವಾಹನ ಸವಾರರಿಗೆ ಸಂತೋಷವಾಗಿದೆ. ಸಾರ್ವಜನಿಕರಿಗೆ ಇದೊಂದು ಬಂಪರ್ ಸುದ್ದಿ ಎಂದರೆ ತಪ್ಪಾಗಲಾರದು.
ಬೆಂಗಳೂರಲ್ಲಿ ಮಳೆ ಬಂದ ಹಿನ್ನೆಲೆ ಸಿಟಿ ರೌಂಡ್ಸ್ ಹೋಗಿದ್ದರು ಸಿಎಂ. ಈ ವೇಳೆ ಎಲ್ಲೆಡೆ ಟ್ರಾಫಿಕ್ ಸಿಕ್ಕಾಪಟ್ಟೆಯಾಗಿತ್ತು. ಈ ಟ್ರಾಫಿಕ್ ಬಿಸಿ ಸಿಎಂ ಕಾರಿಗೂ ತಟ್ಟಿತ್ತು. ಒಬ್ಬ ಮುಖ್ಯಮಂತ್ರಿಯಾಗಿ ಜೀರೋ ಟ್ರಾಫಿಕ್ ಇರುವ ನನಗೇ ಇಷ್ಟೊಂದು ಸಮಸ್ಯೆ ಆಗಿದ್ರೆ, ಇನ್ನು ಜನಸಾಮಾನ್ಯರ ಪಾಡೇನು. ಹೀಗೆ ಆಗಬಾರದು ಎಂದು ಆಲೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಬೆಂಗಳೂರು ಮಳೆಗೆ 70ಕ್ಕೂ ಅಧಿಕ ಮರಗಳು ಬಿದ್ದಿವೆ. 11 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಜೊತೆಗೆ ಕೆ. ಆರ್ ಸರ್ಕರ್ ಅಂಡರ್ ಪಾಸ್ ನಲ್ಲಿ ಕಾರು ಸಿಲುಕಿ ಯುವತಿಯ ಸಾವು ಸಂಭವಿಸಿದೆ. ಇದನ್ನೆಲ್ಲ ನೋಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ರಾಫಿಕ್ ಸಮಸ್ಯೆಯ ಬಗ್ಗೆ ಅರಿವಾಗಿದೆ.