Kornersite

Just In Sports

ಸೂರ್ಯನನ್ನು ಮುಳುಗಿಸಿ, ಪ್ಲೇ ಆಫ್ ಹಾದಿಗೆ ಬಂದು ನಿಂತ ಮುಂಬಯಿ; ಬೆಂಗಳೂರು ಸೋತರಷ್ಟೇ ಲಾಟರಿ!

Mumbai: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬಯಿ ತಂಡವು ಕ್ಯಾಮರೂನ್‌ ಗ್ರೀನ್‌ (Cameron Green) ಸ್ಪೋಟಕ ಶತಕ, ರೋಹಿತ್‌ ಶರ್ಮಾ (Rohit Sharma) ಅರ್ಧಶತಕದ ನೆರವಿಂದ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್‌ ತಂಡವು ಸೋತು 2023 ಐಪಿಎಲ್‌ ಆವೃತ್ತಿಗೆ ವಿದಾಯ ಹೇಳಿದೆ.

ಮುಂಬೈ ಇಂಡಿಯನ್ಸ್‌ ನಿರೀಕ್ಷಿತ ಓವರ್‌ಗಳಲ್ಲಿ ರನ್‌ ಕಲೆಹಾಕದಿದ್ದರೂ ಹೈದರಾಬಾದ್‌ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಐಪಿಎಲ್‌ ಲೀಗ್‌ ಹಂತದಲ್ಲಿ ಆರ್‌ಸಿಬಿ (RCB) ಹಾಗೂ ಗುಜರಾತ್‌ ಟೈಟಾನ್ಸ್‌ (GT) ನಡುವೆ ಇನ್ನೊಂದು ಪಂದ್ಯ ಬಾಕಿಯಿದ್ದು, ಆರ್‌ಸಿಬಿ ಗೆದ್ದರಷ್ಟೇ ಪ್ಲೇ ಆಫ್‌ ತಲುಪಲಿದೆ. 14 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿರುವ ಮುಂಬಯಿ ಇಂಡಿಯನ್ಸ್‌ -0.044 ರನ್‌ ರೇಟ್‌ ಹೊಂದಿದೆ. ಈ ಮೂಲಕ 16 ಅಂಕ ಪಡೆದು 4ನೇ ಸ್ಥಾನಕ್ಕೇರಿದೆ.

ಆದರೆ, ಗುಜರಾತ್ ವಿರುದ್ಧ ನಡೆಯಲಿರುವ ಇಂದಿನ ಪಂದ್ಯದಲ್ಲಿ ಆರ್ ಸಿಬಿ 7 ಪಂದ್ಯ ಗೆದ್ದು +0.180 ರನ್‌ರೇಟ್‌ ನೊಂದಿಗೆ 14 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಒಂದು ವೇಳೆ ಗುಜರಾತ್‌ ಟೈಟಾನ್ಸ್‌ ವಿರುದ್ಧ ಪಂದ್ಯದಲ್ಲಿ ಉತ್ತಮ ಜಯ ಸಾಧಿಸುವಲ್ಲಿ ಯಶಸ್ವಿಯಾದರೆ ಆರ್‌ಸಿಬಿ ಖಚಿತವಾಗಿ ಪ್ಲೇ ಆಫ್‌ ತಲುಪಲಿದೆ. ಪ್ರಬಲ ಪೈಪೋಟಿ ನೀಡಿದರೂ ಆರ್‌ಸಿಬಿಗೆ ಪ್ಲೇ ಆಫ್‌ ತಲುಪುವ ಅವಕಾಶವಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 200 ರನ್‌ ಪೇರಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ 18 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿ ಜಯ ಸಾಧಿಸಿತು. ಕ್ಯಾಮರೂನ್‌ ಗ್ರೀನ್‌ ಹಾಗೂ ನಾಯಕ ರೋಹಿತ್‌ ಶರ್ಮಾ ಜೋಡಿ 13.1 ಓವರ್‌ ಗಳಲ್ಲಿ 148 ರನ್‌ ಗಳಿಸಿತ್ತು. ಕ್ಯಾಮರೂನ್‌ ಗ್ರೀನ್‌ 47 ಎಸೆತಗಳಲ್ಲಿ 100 ರನ್‌, ರೋಹಿತ್‌ ಶರ್ಮಾ 56 ರನ್‌, ಸೂರ್ಯಕುಮಾರ್‌ ಯಾದವ್‌ 25 ರನ್‌ ಹಾಗೂ ಇಶಾನ್‌ ಕಿಶನ್ ‌14 ರನ್‌ ಗಳಿಸಿ ತಂಡದ ಗೆಲುವಿಗೆ ನೆರವಾದರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್