ಚೆನ್ನೈ : ಪ್ರಸಕ್ತ ವರ್ಷದ ಐಪಿಎಲ್ (IPL 2023) ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್ ಹಂತದ ಎಲ್ಲ ಪಂದ್ಯಗಳು ಮುಗಿದಿವೆ. ಹೀಗಾಗಿ ರೋಚಕ ಹಂತಕ್ಕೆ ಐಪಿಎಲ್ ತಿರುಗಿದ್ದು, ಮೇ 23ರಿಂದ ಪ್ಲೇ ಆಫ್ (IPL 2023 Playoffs) ಪಂದ್ಯಗಳು ಆರಂಭವಾಗಲಿದೆ.
ಐಪಿಎಲ್ ನಲ್ಲಿ ಭಾಗವಹಿಸಿರುವ 10 ತಂಡಗಳ ಪೈಕಿ ಗುಜರಾತ್ ಟೈಟಾನ್ಸ್ (GT), ಚೆನ್ನೈ ಸೂಪರ್ ಕಿಂಗ್ಸ್ (CSK), ಲಕ್ನೋ ಸೂಪರ್ ಜೈಂಟ್ಸ್ (LSG) ಹಾಗೂ ಮುಂಬಯಿ ಇಂಡಿಯನ್ಸ್ (MI) ಈಗಾಗಲೇ ಪ್ಲೇ ಆಪ್ ನಲ್ಲಿ ಸೆಣಸಾಟ ನಡೆಸಲು ಸಿದ್ಧವಾಗಿವೆ.
ಮೇ 23ರಂದು ಮೊದಲ ಕ್ವಾಲಿಫೈಯರ್ ಪಂದ್ಯ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಬಲಿಷ್ಠ ತಂಡಗಳ ನಡುವೆ ನಡೆಯಲಿದೆ. ಮೇ 24ರಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬಯಿ ಇಂಡಿಯನ್ಸ್ ನಡುವೆ ಮೊದಲ ಎಲಿಮಿನೇಟರ್ ಪಂದ್ಯಗಳು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಸೋತ ತಂಡ ಹಾಗೂ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡಗಳ ನಡುವೆ ಮೇ 26ರಂದು 2ನೇ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಕಾದಾಟದಲ್ಲಿ ಗೆದ್ದ ತಂಡ ಫೈನಲ್ ತಲುಪಲಿದೆ. ಅಂತಿಮವಾಗಿ ಮೇ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯ ನಡೆಯಲಿದೆ.
ಚೆನ್ನೈ ತಂಡದ ನಾಯಕ ಎಂ.ಎಸ್ ಧೋನಿ ಈ ಬಾರಿ ಐಪಿಎಲ್‌ನೊಂದಿಗೆ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳುವ ಸಾಧ್ಯತೆ ಇದ್ದು, ಮಹಿ ಬ್ಯಾಟಿಂಗ್ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರವಾಗಿದ್ದಾರೆ.