Kornersite

Crime Just In State

ಹನಿಟ್ರ್ಯಾಪ್ ಮಾಡುವಂತೆ ಮಂಗಳಮುಖಿಯರಿಗೆ ಒತ್ತಾಯ; ಒಪ್ಪದ್ದಕ್ಕೆ ಹಲ್ಲೆ!

ಆರ್ಥಿಕವಾಗಿ ಸ್ಥಿತಿವಂತರನ್ನು ಹನಿಟ್ರ್ಯಾಪ್ ಗೆ ಕೆಡವಲು ಸಂಚು ರೂಸಿದ್ದ ಯುವಕರ ತಂಡವೊಂದು, ಇದಕ್ಕಾಗಿ ಮಂಗಳಮುಖಿಯರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ಮಂಗಳಮುಖಿಯರು ಒಪ್ಪದ ಹಿನ್ನೆಲೆಯಲ್ಲಿ ಅವರ ಮೇಲೆ ಯುವಕರ ತಂಡ ಹಲ್ಲೆ ನಡೆಸಿದೆ.
ಈ ಘಟನೆ ಗಂಗಾವತಿಯಲ್ಲಿ ನಡೆದಿದೆ.

ಯುವಕರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವವರನ್ನು ಗಾಂಧಿ ವೃತ್ತದ ನಿವಾಸಿಗಳಾದ ಅನುಶ್ರೀ, ರತ್ನಾ ಅಲಿಯಾಸ್ ರತಿ ಮತ್ತು ಸುಕನ್ಯಾ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಆಸ್ಪತ್ರೆ ವೈದ್ಯ ವಾದಿರಾಜ್, ಗಾಯಾಳುಗಳಾಗಿದ್ದು, ಮಹಿಳೆಯರಿಗೆ ಗಂಭೀರ ಸ್ವರೂಪದ ಪೆಟ್ಟುಗಳಾಗಿವೆ ಎಂದು ಹೇಳಿದ್ದಾರೆ.

ಗಂಗಾವತಿಯ ಅಮರ್ ಭಗತ್ ಸಿಂಗ್ ನಗರದ ಯುವಕನೊಬ್ಬನ ನೇತೃತ್ವದ ತಂಡವು ಶ್ರೀಮಂತ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಗೆ ಬೀಳಿಸಲು ತಂತ್ರ ರೂಪಿಸಿತ್ತು. ಈ ತಂತ್ರದ ಭಾಗವಾಗಿ ಮಂಗಳಮುಖಿರಯನ್ನು ಬಳಸಿಕೊಂಡು ಯೋಜನೆ ಕಾರ್ಯಗತ ಮಾಡುವುದು ಯುವಕರ ಉದ್ಧೇಶವಾಗಿತ್ತು. ಲೈಂಗಿಕ ಆಸಕ್ತಿ ತೋರುವ ಶ್ರೀಮಂತರನ್ನು ನಾವೇ ನಿಮ್ಮ ಬಳಿ ಕಳುಹಿಸುತ್ತೇವೆ. ಅವರಿಗೆ ಲೈಂಗಿಕ ಆಸೆ ತೋರಿಸಿ ಇಲ್ಲಿ ಕರೆತರಬೇಕು. ಆಗ ನಾವು ಹಣ ವಸೂಲಿ ಮಾಡುತ್ತೇವೆ. ಗೌರವಕ್ಕೆ ಅಂಜಿ ಅವರು ಹಣ ನೀಡುತ್ತೆ ಎಂದು ಯುವಕರು, ಮಂಗಳಮುಖಿಯರಿಗೆ ತಿಳಿಸಿದ್ದಾರೆ. ಆದರೆ, ಇದಕ್ಕೆ ಒಪ್ಪದ ಮಂಗಳಮುಖಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ