ಜನಪ್ರಿಯ ಸಂಗೀತ ನಿರ್ದೇಶಕ ಕೋಟಿ-ರಾಜ್ ಜೋಡಿಯಲ್ಲಿ ಒಬ್ಬರಾದ ರಾಜ್ ಮೇ 21ರಂದು ವಾನ್ನಪ್ಪಿದ್ದಾರೆ. ಹೃದಯಾಘಾತದಿಂದ (Heart Attack) ರಾಜ್ (Raj) ನಿಧನರಾಗಿದ್ದಾರೆ.
ಸಂಗೀತ ನಿರ್ದೇಶಕ ರಾಜ್ (Music Director Raj) ಅವರಿಗೆ 68 ವರ್ಷ ವಯಸ್ಸಾಗಿತ್ತು. ರಾಜ್ ಅವರು ಸಲೂರಿ ಕೋಟೆಶ್ವರ ರಾವ್ ಜೊತೆ ಸೇರಿ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜ್ ಹಾಗೂ ಕೋಟಿ 1982ರಿಂದ 1994ರವರೆಗೆ ಒಟ್ಟಿಗೆ ಕೆಲಸ ಮಾಡುತ್ತಾ ಸುಮಾರು 180 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಈ ಜೋಡಿ ಸುಮಾರು 3 ಸಾವಿರ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದೆ. 1994ರ ನಂತರ ಇಬ್ಬರೂ ಸಂಗೀತ ನಿರ್ದೇಶಕರು ಬೇರಾಗಿ ಏಕಾಂಗಿಯಾಗಿ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಲು ಆರಂಭಿಸಿದ್ದರು.
ರಾಜ್- ಕೋಟಿ ಕನ್ನಡದ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದ ಸ್ನೇಹದ ಕಡಲಲ್ಲಿ (Snehada Kadalali), ಎದುರು ಮನೇಲಿ ಗಂಡ, ಪಕ್ಕದ ಮನೇಲಿ ಹೆಂಡ್ತಿ, ನಗರದಲ್ಲಿ ನಾಯಕರು, ರಾಯರು ಬಂದರು ಮಾವನ ಮನೆಗೆ ಹಾಗೂ ಕಿಲಾಡಿಗಳು ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶಕ ರಾಜ್ ಅವರ ನಿಧನಕ್ಕೆ ಮೆಗಾ ಸ್ಟಾರ್ ಚಿರಂಜೀವಿ (Megastar Chiranjeevi) ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.