Kornersite

Just In Sports

ಆರ್ ಸಿಬಿಗೆ ಕಂಟಕವಾಗಿದ್ದ ಶುಭಮನ್ ಗಿಲ್ ಸಹೋದರಿಗೆ ನಿಂದನೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೆ ಆಫ್ ಗೆ ಹೋಗದೆ ಹೊರ ನಡೆದಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಬೇಕಾಗಿದ್ದ ಪಂದ್ಯವನ್ನು ಸೋತಿದ್ದು, ಸದ್ಯ ಗುಡ್ ಬೈ ಹೇಳಿದೆ.

ಬೆಂಗಳೂರು ತಂಡಕ್ಕೆ ಕಂಟಕವಾಗಿ ಗುಜರಾತ್ ತಂಡದ ಶುಭಮನ್ ಗಿಲ್ ಕಂಟಕವಾಗಿ ಪರಿಣಮಿಸಿದ್ದರು. ಗಿಲ್ (Shubhman Gill) ಸ್ಫೋಟಕ ಬ್ಯಾಟಿಂಗ್ ನಡೆಸಿ, ಆಕರ್ಷಕ ಶತಕ ಸಿಡಿಸಿ ಗೆಲುವು ತಂದುಕೊಟ್ಟರು. ಕೇವಲ 52 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆರ್ಸಿಬಿ ಹಾಗೂ ಗುಜರಾತ್ ನಡುವಣ ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಶುಭ್ಮನ್ ಗಿಲ್ ಸಹೋದರಿ ಶಹನೀಲ್ ಗಿಲ್ ಕೂಡ ಆಗಮಿಸಿದ್ದರು. ಇವರು ವಾರದ ಹಿಂದೆ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಫೋಟೋಕ್ಕೆ ಸಾಕಷ್ಟು ಕಮೆಂಟ್ಗಳು ಬರುತ್ತಿವೆ. ಬೆಂಗಳೂರು ಸೋಲುತ್ತಿದ್ದಂತೆ ಶಹನೀಲ್ ಹಂಚಿಕೊಂಡಿರುವ ಫೋಟೋಕ್ಕೆ ಆರ್ಸಿಬಿ ಪಾಲಿಗೆ ವಿಲನ್ ಆದ ಶುಭ್ಮನ್ ಗಿಲ್ ಅವರ ಸಹೋದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕೆಲ ಅಭಿಮಾನಿಗಳು ಗಿಲ್ ಹಾಗೂ ಶಹನೀಲ್ ಪರವಾಗಿ ತಕ್ಕ ಉತ್ತರ ಕೊಟ್ಟಿದ್ದಾರೆ. ಗಿಲ್ ತಮ್ಮ ತಂಡಕ್ಕೆ ಬೇಕಾದ ಕೊಡುಗೆ ಸಲ್ಲಿಸಿದ್ದಾರೆ. ಇದರಲ್ಲಿ ಅವರ ತಪ್ಪೇನಿದೆ?, ಅವರ ಸಹೋದರಿಯನ್ನು ಯಾಕೆ ಇದರ ನಡುವೆ ಎಳೆತರುತ್ತೀರಿ ಎಂದು ಬರೆದುಕೊಂಡಿದ್ದಾರೆ.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್