ಬೆಂಗಳೂರಿನಲ್ಲಿ ನಿನ್ನೆ ಭರ್ಜರಿ ಮಳೆ ಸುರಿದಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, ಸಾಕಷ್ಟು ಅವಾಂತರಗಳು ನಡೆದಿವೆ. ಮಲ್ಲೇಶ್ವರಂನ ಚಿನ್ನಾಭರಣ ಮಳಿಗೆಗೆ ಮಳೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸುವಂತಾಗಿದೆ.
ಚಿನ್ನಾಭರಣ ಮಳಿಗೆಗೆ ಮಳೆ ನೀರು ನುಗ್ಗಿ ಆತಂಕ ಸೃಷ್ಟಿಯಾಗಿದ್ದು, ಮಳೆಯ ನೀರು ಅಂಗಡಿಗೆ ನುಗ್ಗಿ ಸುಮಾರು ಎರಡುವರೆ ಕೋಟಿ ರೂ. ನಷ್ಟವಾಗಿದೆ. ಚಿನ್ನಾಭರಣ ಮಳಿಗೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ರಣ ಭೀಕರ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ. ಹಲವೆಡೆ ಮರ, ಲೈಟ್ ಕಂಬಗಳು ಧರೆಗುರುಳಿವೆ. ಭಾರೀ ಅನಾಹುತ ಸಂಭವಿಸಿದೆ.
ಮಹಾಲಕ್ಷ್ಮೀ ಲೇಔಟ್ನ ಗಣೇಶ ಬ್ಲಾಕ್ಗೆ ಜಲದಿಗ್ಬಂಧನ ಬಿದ್ದಿದ್ದು, ನೂರಾರು ಮನೆಗಳು ಮುಳುಗಿವೆ. ಮನೆಯಲ್ಲಿದ್ದ ಸಾಮಾಗ್ರಿಗಳೂ ನೀರುಪಾಲಾಗಿದ್ದು, ಕಾರು, ಬೈಕ್ಗಳೆಲ್ಲ ನೀರಿನಲ್ಲಿಯೇ ನಿಂತಿವೆ. ಮಲ್ಲೇಶ್ವರಂನ ಚಿನ್ನಾಭರಣ ಮಳಿಗೆಗೆ ಮಳೆ ನೀರು ನುಗ್ಗಿ ಎರಡೂವರೆ ಕೋಟಿ ಲಾಸ್ ಆಗಿದ್ದು ಶಾಪ್ ಮಾಲೀಕಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.