14 ವರ್ಷದ ಕೊಳಗೇರಿ ಹುಡುಗಿ ಮಲೀಶಾ ಖಾರ್ವಾ ಈಗ ಮಾಡೆಲ್ ಆಗಿದ್ದಾರೆ. ಹಾಲಿವುಡ್ ನಟ ರಾಬರ್ಟ್ ಹಾಫ್ಮನ್ ಅವರು 2020 ರಲ್ಲಿ ಮುಂಬೈನಲ್ಲಿ ಮ್ಯೂಸಿಕ್ ವೀಡಿಯೋವನ್ನು ಚಿತ್ರೀಕರಿಸುವಾಗ ಮಲೀಶಾ ಅವರನ್ನು ಪತ್ತೆಹಚ್ಚಿದರು ಈ ಹಾಲಿವುಡ್ ತಾರೆ ಆಕೆಗೆ ಆರ್ಥಿಕವಾಗಿ ಸಹಾಯ ಮಾಡಲು ಗೋ ಫಂಡ್ ಮಿ ಎಂಬ ಪುಟವನ್ನು ಸಹ ಸ್ಥಾಪಿಸಿದ್ದರು. ನಂತರ ಮಲೀಶಾ ಪ್ರಸಿದ್ಧಿಯನ್ನು ಗಳಿಸಿ, ಪ್ರಸ್ತುತ ಆಕೆ ಇನ್ಸ್ಟಾಗ್ರಾಮ್ ನಲ್ಲಿ 225 ಸಾವಿರಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಹಲವಾರು ಮಾಡೆಲಿಂಗ್ ಗಿಗ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾಳೆ.

ಲೈವ್ ಯುವರ್ ಫೇರಿಟೇಲ್ ಎಂಬ ಕಿರು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಆಕೆಯನ್ನು ಪ್ರಿನ್ಸೆಸ್ ಆಫ್ ದಿ ಸ್ಲಮ್’ ಎಂದು ಕರೆಯುತ್ತಾರೆ. ಪ್ರಸ್ತುತ ಮಲೀಶಾ ಐಷಾರಾಮಿ ಬ್ಯೂಟಿ ಬ್ರಾಂಡ್ ‘ಫಾರೆಸ್ಟ್ ಎಸೆನ್ಷಿಯಲ್’ ನ ಹೊಸ ಅಭಿಯಾನವಾದ ‘ಯುವತಿ ಸೆಲೆಕ್ಷನ್’ ಹೊಸ ಮುಖವಾಗಿ ಕಾಣಿಸಿಕೊಂಡಿದ್ದಾಳೆ. ಇದು ಯುವ ಮನಸ್ಸುಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಏಪ್ರಿಲ್ನಲ್ಲಿ ಈ ಬ್ರಾಂಡ್ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಮಲೀಶಾ ಅವರ ಸುಂದರವಾದ ವೀಡಿಯೋವನ್ನು ಹಂಚಿಕೊಂಡು, ಅದಕ್ಕೆ ‘ಅವಳ ಕನಸುಗಳು ಅವಳ ಮುಂದೆ ತೆರೆದುಕೊಳ್ಳುವುದನ್ನು ನೋಡಿದಾಗ ಆಕೆಯ ಮುಖ ಸಂತೋಷದಿಂದ ಅರಳಿತು. ಕನಸುಗಳು ನಿಜವಾಗಿಯೂ ನನಸಾಗುತ್ತವೆ ಎಂಬುದಕ್ಕೆ ಮಲೀಶಾ ಅವರ ಕಥೆಯು ಸುಂದರವಾದ ಜ್ಞಾಪನೆಯಾಗಿದೆ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ. ವೀಡಿಯೋದಲ್ಲಿ ಮಲೀಶಾ ಬ್ರಾಂಡ್ ಅಂಗಡಿಗೆ ಪ್ರವೇಶಿಸುತ್ತಾಳೆ, ಅಲ್ಲಿ ಆಕೆಯ ಪ್ರಚಾರದ ಚಿತ್ರಗಳಿದ್ದವು, ಅದನ್ನು ನೋಡಿ ಆಕೆ ಮನಸ್ಪೂರ್ವಕವಾಗಿ ಸಂತೋಷಪಡುವುದು ಇದೆ.