Kornersite

Crime Just In Karnataka State

CCTV VIDEO: ಮನೆ ಮುಂದೆ ಬೈಕ್ ನಿಲ್ಲಸಬೇಡ ಎಂದಿದಕ್ಕೆ ಮಚ್ಚಿನಿಂದ ಹಲ್ಲೆ!

ಮನೆ ಮುಂದೆ ಬೈಕ್ ನಿಲ್ಲಿಸೋ ವಿಚಾರಕ್ಕೆ ಶುರುವಾದ ಚಿಕ್ಕ ಜಗಳ ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ನಡೆದಿರೋದು ವಿಜಯಪುರದ ಟಕ್ಕೆಯಲ್ಲಿ.

ಅಸಲಿಗೆ ಕಿರಣ್ ಗಜಕೋಶ ಎನ್ನುವವರು ಮನೆಯ ಎದುರು ಇರುವ ಬಸಯ್ಯ ಹಿರೇಮಟ ಎನ್ನುವವರಿಗೆ ನಮ್ಮ ಕಾರು ಬರುತ್ತದೆ. ನೀವು ನಿಲ್ಲಿಸಿದ ಬೈಕೆ ತೆಗಿರಿ ಎಂದು ಹೇಳಿದ್ದಾರೆ. ಹಿಗೆ ಮಾತಿಗೆ ಮಾತು ಬೆಳೀತಾನೇ ಇತ್ತು. ಆದ್ರೆ ಅಷ್ಟೋತ್ತಿಗೆ ಆಸಾಮಿ ಮನೆಯೊಳಗಿದ್ದ ಮಚ್ಚು ಹಿಡಿದು ಬಂದು ಏಕಾಏಕಿಯಾಗಿ ಕತ್ತಿಗೆ ಮಚ್ಚು ಬೀಸಿದ್ದಾನೆ. ಮನೆ ಮುಂದೆ ನಡೆದ ಘಟನೆ ಪಕ್ಕದ ಮನೆಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಷ್ಟಕ್ಕೆ ಮುಗಿಲಿಲ್ಲ ನೋಡಿ ಮನೆಯಿಂದ ಹೊರಗೆ ಬಂದ ಹೆಂಗಸು ಕೊಡಲಿಯಿಂದ ಹೊಡೆಯುವುದಕ್ಕೆ ಮುಂದಾಗಿದ್ದಾಳೆ. ಒಂದು ಕಡೆ ಲೇಡೀಸ್ ಫೈಟಿಂಗ್ ನಡೆಸಿದರೇ, ಮತ್ತೊಂದು ಕಡೆ ಮತ್ತು ಬೀಸಿದವನನ್ನ ಜನರು ಕಂಟ್ರೋಲ್ ಮಾಡುತ್ತಿದ್ದಾರೆ. ಅದೃಷ್ಟವಶಾತ್ ಕಿರಣ್ ಗಜಕೋಶ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ