ಮಹಾತಾಯಿಯೊಬ್ಬರು ಐವರು ಮಕ್ಕಳಿಗೆ ಒಂದೇ ಬಾರಿ ಜನ್ಮ ನೀಡಿರುವ ಘಟನೆ ಜಾರ್ಖಂಡ್ ನ ರಾಂಚಿಯ ರಿಮ್ಸ್ ನಲ್ಲಿ ಬೆಳಕಿಗೆ ಬಂದಿದೆ.
ಸದ್ಯ ಈ ಸುದ್ದಿ ಕೇಳಿ ಜನರು ಅಚ್ಚರಿ ಪಡುತ್ತಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಎಲ್ಲಾ ಐದು ಶಿಶುಗಳು ಆರೋಗ್ಯಕರ ಸ್ಥಿತಿಯಲ್ಲಿವೆ ಮತ್ತು ನಿಯೋನಾಟಲ್ ತೀವ್ರ ನಿಗಾ ಘಟಕದಲ್ಲಿ (NICU) ವೀಕ್ಷಣೆಗಾಗಿ ಇರಿಸಲಾಗಿದೆ.
RIMS ರಾಂಚಿ ತನ್ನ ಟ್ವಿಟ್ಟರ್ ನಲ್ಲಿ, ಚತಾರ್ನ ಮಹಿಳೆಯೊಬ್ಬರು RIMS ನಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಿಶುಗಳು NICU ನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿವೆ. ಡಾ. ಶಶಿಬಾಲಾ ಸಿಂಗ್ ಅವರ ನೇತೃತ್ವದಲ್ಲಿ ಯಶಸ್ವಿ ಹೆರಿಗೆಯನ್ನು ನಡೆಸಲಾಯಿತು ಎಂದು ಬರೆದುಕೊಳ್ಳಲಾಗಿದೆ. ನವಜಾತ ಶಿಶುಗಳು ಕಡಿಮೆ ತೂಕ ಹೊಂದಿದ್ದು, ಸದ್ಯಕ್ಕೆ NICU ನಲ್ಲಿ ಇರಿಸಲಾಗಿದೆ. ವೈದ್ಯರ ತಂಡವು ತಾಯಿ ಮತ್ತು ಶಿಶುಗಳ ಮೇಲೆ ನಿಗಾ ಇರಿಸಿದೆ.