Chitradurga: ಮೃತ ಹಸುವಿನ ಪೋಸ್ಟ್ ಮಾರ್ಟಂ ವರದಿ ನೀಡಲು ಹಣ ಕೇಳಿದ ಪಶು ವೈದ್ಯಧಿಕಾರಿ ಇದೀಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಈ ಘಟನೆ ನಡೆದಿದ್ದು ಚಿತ್ರದುರ್ಗದಲ್ಲಿ. ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಮೃತ ಹಸುವಿನ ಮರಣೋತ್ತರ ಪರೀಕ್ಷೆ ವರದಿಯನ್ನ ನೀಡಲು ಪಶು ವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ ರೈತರಿಂದ ಹಣದ ಬೇಡಿಕೆ ಇಟ್ಟಿದ್ದಾರೆ.
ಅಸಲಿಗೆ ಕಾಗಳಗೆರೆ ಗ್ರಾಮದ ರೈತರಾದ ಎಸ್. ಸ್ವಾಮಿ ಎಂಬುವವರ ಬಳಿ ಏಳು ಸಾವಿರಕ್ಕೆ ಬೇಡಿಕೆ ಇಟ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿ, ಲಂಚ ಸ್ವಿಕರಿಸುವಾಗಲೇ ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಮೃತ್ಯುಂಜಯ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.
ರಾಜ್ಯದಲ್ಲಿ ಪಶುಗಳಿಗೆ ಇತ್ತೀಚೆಗೆ ಕಾಣಿಸಿಕೊಂಡ ಚರ್ಮಗಂಟು ರೋಗದಿಂದ ಹಸುಗಳು ಸಾವನ್ನಪ್ಪಿದ್ದವು. ಚರ್ಮಗಂಟು ರೋಗದಿಂದ ಹಸು ಸತ್ತರೆ ಮಾಲೀಕರಿಗೆ ಪರಿಗಾರ ಕೊಡೋದಾಗಿ ಬೊಮ್ಮಾಯಿ ಸರ್ಕಾರ ಘೋಷಣೆ ಮಾಡಿತ್ತು. ಈ ಹಿನ್ನೆಲೆ ಗ್ರಾಮೀಣ ಭಾಗದಲ್ಲಿ ರೈತರ ಹಸುಗಳು ಚರ್ಮಗಂಟು ರೋಗ ಹಾಗೂ ಇನ್ನ್ನೀತರ ನೈಸರ್ಗಿಕ ಕಾರಣಗಳಿಂದ ಹಸು ಸಾವನ್ನಪ್ಪಿದ್ದರೆ ಪೋಸ್ಟ್ ಮಾರ್ಟಂ ವರದಿಗಾಗಿ ವೈದ್ಯರ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಡಾ. ತಿಪ್ಪೇಸ್ವಾಮಿ ಲಂಚ ಕೇಳಿದ್ದಾರೆ. ಮಾಡಿದ ತಪ್ಪಿಗೆ ಕಂಬಿ ಎಣಿಸುತ್ತಿದ್ದಾರೆ.