2022ರ ಯುಪಿಎಸ್‍ಸಿ (UPSC) ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಟಾಪ್-10ರ ರ ಪಟ್ಟಿಯನ್ನು ಗಮನಿಸಿದಾಗ ಕ್ರಮವಾಗಿ ನಾಲ್ಕು ಸ್ಥಾನಗಳನ್ನು ಯುವತಿಯರೇ ಪಡೆದಿದ್ದಾರೆ.

ಈ ಮೂಲಕ ಟಾಪ್ 10ರ ಪಟ್ಟಿಯಲ್ಲಿ 6 ಸ್ಥಾನಗಳನ್ನು ಯುವತಿಯರೇ ಪಡೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಟಾಪರ್ಸ್ (Toppers) ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇಶಿತಾ ಕಿಶೋರ್ (Ishita Kishore), ಗರಿಮಾ ಲೋಹಿಯಾ, ಉಮಾ ಹರತಿ ಎನ್, ಸ್ಮೃತಿ ಮಿಶ್ರಾ, ಮಯೂರ್ ಹಜಾರಿಕಾ, ಗಹನಾ ನವ್ಯಾ ಜೇಮ್ಸ್, ವಸೀಮ್ ಅಹ್ಮದ್ ಭಟ್, ಅನಿರುದ್ಧ್ ಯಾದವ್, ಕನಿಕಾ ಗೋಯಲ್ ಮತ್ತು ರಾಹುಲ್ ಶ್ರೀವಾಸ್ತವ. ಈ ಹತ್ತು ಅಭ್ಯರ್ಥಿಗಳು ಟಾಪ್ 10 ಪಟ್ಟಿಯಲ್ಲಿದ್ದಾರೆ.

ಸೆ.2022 ರಲ್ಲಿ ನಾಗರಿಕ ಸೇವಾ ಆಯೋಗ ನಡೆಸಿದ ಲಿಖಿತ ಪರೀಕ್ಷೆ (Civil Services Examination 2022 )ಮತ್ತು ಮೇ 2023 ರಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ 933 ಅಭ್ಯರ್ಥಿಗಳ ಪಟ್ಟಿಯನ್ನು ಶಿಫಾರಸ್ಸು ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.