Kornersite

Bollywood Crime Entertainment Just In

Actress: ಅಪಘಾತಕ್ಕೆ ಬಲಿಯಾದ ಯುವ ನಟಿ; ಯುವ ನಟಿಯ ಸಾವಿಗೆ ಕಂಗಾಲಾದ ಸೀರಿಯಲ್ ಲೋಕ!

ಹಿಂದಿಯ ‘ಸಾರಾಭಾಯ್ vs ಸಾರಾಭಾಯ್’ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟಿ ವೈಭವಿ ಉಪಾಧ್ಯಾಯ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಮಂಗಳವಾರ ಈ ದುರ್ಘಟನೆ ನಡೆದಿದೆ. ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಬರದೆ ಪಲ್ಟಿ ಆಗಿದೆ. ವೈಭವಿ ಉಪಾಧ್ಯಾಯ ಹಾಗೂ ಅವರ ಭಾವಿ ಪತಿ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿಯೇ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

ವೈಭವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವೈಭವಿ ಶವವನ್ನು ಮುಂಬೈಗೆ ಕರೆತರಲಾಗುತ್ತಿದೆ. ಇಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಇತ್ತೀಚೆಗಷ್ಟೇ ಹಿಂದಿ ಕಿರುತೆರೆ ನಟ ಆದಿತ್ಯ ಸಿಂಗ್ ರಜಪೂತ್ ಸಾವನ್ನಪ್ಪಿದ್ದರು. ಈಗ ಮತ್ತೊಂದು ಸಾವು ಸಂಭವಿಸಿದ್ದು, ಕಿರುತೆರೆಗೆ ಶಾಕ್ ಎದುರಾಗಿದೆ. ಗಣ್ಯರು ವೈಭವಿ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,