ಒಂದೇ ಕುಟುಂಬದ ನಾಲ್ವರನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಘಟನೆ ಒಡಿಶಾದ ಬರ್ಬಢದಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಸೋದರ ಸಂಬಂಧಿಗಳೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಮೃತರನ್ನು ಗುರುದೇವ್ ಬಾಗ್, ಅವರ ಪತ್ನಿ ಸಿಬಗ್ರಿ ಬಾಗ್, ಅವರ ಮಗ ಚೂಡಾಮಣಿ (15) ಮತ್ತು ಮಗಳು ಶ್ರಾವಣಿ (10) ಎಂದು ಗುರುತಿಸಲಾಗಿದೆ.

ಆರೋಪಿಗಳು ಸಂತ್ರಸ್ಥರ ಮನೆಗೆ ನುಗ್ಗಿ ತಮ್ಮ ಸೋದರಳಿಯ, ಸೊಸೆ ಮತ್ತು ಅವರ ಮಗ ಮತ್ತು ಮಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಅಲ್ಲಿನ ಎಸ್ ಡಿಪಿಓ ಅಮಿತ್ ಕುಮಾರ್ ಪಾಂಡಾ ಹೇಳಿದ್ದಾರೆ. ಎಲ್ಲರನ್ನೂ ಕೊಲೆ ಮಾಡಿದ ನಂತರ ಆರೋಪಿ ಪಾರ್ಬತಿ ಬಾಗ್ ಎಂಬಾತನೇ ವಿಷಯವನ್ನು ಊರಿನಲ್ಲಿ ತಿಳಿಸಿದ್ದಾನೆ. ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಎರಡು ಕುಟುಂಬ ವರ್ಗದವರ ನಡುವೆ ಇದ್ದ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಎಲ್ಲರನ್ನೂ ಹತ್ಯೆ ಮಾಡಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ದಿನಗಳಿಂದ ನನ್ನ ಪತಿ ಚಾಕು ಹಿಡಿದುಕೊಂಡು ಓಡಾಡುತ್ತಿದ್ದರು. ಅವರು ಕೊಲೆ ಬೆದರಿಕೆ ಹಾಕಿದ್ದರು. ಹೀಗಾಗಿ ಸಿಟ್ಟಿನಲ್ಲಿ ಕೊಲೆ ಮಾಡಿದ್ದಾನೆ ಎಂದು ಆರೋಪಿಯ ಪತ್ನಿ ಹೇಳಿದ್ದಾರೆ.