ಪ್ರೇಮ ವಿಚಾರವಾಗಿ ಪೊಲೀಸ್ ಪೇದೆಯೊಬ್ಬ ತನ್ನ ಗೆಳತಿಯನನು ಗುಂಡು ಹಾರಿಸಿ ಕೊಲೆ ಮಾಡಿ ನಂತರ ಆಕೆಯ ತಂದೆಯನ್ನೂ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ.

ಈತ ಮೊದಲು ಗೆಳತಿಗೆ ಗುಂಡು ಹಾರಿಸಿ, ಅವರ ತಂದೆ ಕೊಂದು, ಕೊನೆಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿ ಪೊಲೀಸ್ ಪೇದೆ 26 ವರ್ಷದ ಸುಭಾಷ್ ಖರಾಡಿ, ಬರ್ಚಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲಿಖೇಡಿಯಲ್ಲಿ 55 ವರ್ಷ ವಯಸ್ಸಿನ ಜೈಕರ್ ಶೇಖ್ ಅವರ ನಿವಾಸಕ್ಕೆ ದೇಶಿ ನಿರ್ಮಿತ ಪಿಸ್ತೂಲ್ ನೊಂದಿಗೆ ಮಧ್ಯರಾತ್ರಿ ತೆರಳಿದ್ದಾನೆ. ಜೈಕರ್ ಶೇಖ್ ಹಾಗೂ ಅವರ 25 ವರ್ಷದ ಮಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಜೈಖರ್ ಶೇಖ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮಗಳು ಇಂದೋರ್ ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಂತರ ಸುಭಾಷ್ ಮೃತ ದೇಹವು ರೈಲು ಹಳಿಯ ಮೇಲೆ ಸಿಕ್ಕಿದೆ ನ್ನಲಾಗಿದೆ. ಪ್ರೇಮ ವಿಚಾರವಾಗಿಯೇ ಈ ಘಟನೆ ನಡೆದಿದೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.