ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳ ಜೂನ್ ತಿಂಗಳ ರಜಾ ಪಟ್ಟಿ ಬಿಡುಗಡೆ ಮಾಡಿದೆ. ಜೂನ್ ತಿಂಗಳಲ್ಲಿ ವಾರದ ರಜೆಗಳು ಸೇರಿದಂತೆ ಬ್ಯಾಂಕ್ ಗಳು ಒಟ್ಟು 12 ದಿನಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ.

ಆದರೆ, ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸುವುದಿಲ್ಲ. ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕ್ ಗಳಿಗೂ ಅನ್ವಯಿಸುತ್ತವೆ. ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶದಾದ್ಯಂತ ಎಲ್ಲ ಬ್ಯಾಂಕ್ ಗಳಿಗೆ ರಜೆ ಇರುತ್ತವೆ.
ಬ್ಯಾಂಕ್ ನ ರಜೆಗಳು ಈ ರೀತಿಯಾಗಿದ್ದು, ಜೂ.4: ಭಾನುವಾರ
ಜೂ.10: ಎರಡನೇ ಶನಿವಾರ
ಜೂ.11: ಭಾನುವಾರ
ಜೂ.15: ಗುರುವಾರ (ಮಿಜೋರಾಂ ಮತ್ತು ಒಡಿಶಾ)
ಜೂ.18:ಭಾನುವಾರ
ಜೂ.20: ಕಾಂಗ್ (ರಥಜಾತ್ರೆ ಅಥವಾ ರಥಯಾತ್ರ. ಒಡಿಶಾ ಮತ್ತು ಮಣಿಪುರ)
ಜೂ.24: ನಾಲ್ಕನೇ ಶನಿವಾರ
ಜೂ.25: ಭಾನುವಾರ
ಜೂ.26: ಖರ್ಚಿ ಪೂಜಾ (ತ್ರಿಪುರಾ)
ಜೂ.28: ಈದ್ -ಉಲ್-ಅಧಾ (ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳ)
ಜೂ.29 :ಈದ್ -ಉಲ್-ಅಧಾ (ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ)
ಜೂ.30: ರೆಮ್ನ ನಿ/ಈದ್ -ಉಲ್ ಅಧಾ (ಮಿಜೋರಾಂ ಹಾಗೂ ಒಡಿಶಾ)