Bangalore : ಭಾರತ ಹಾಗೂ ವಿದೇಶಗಳಲ್ಲಿ ಚಿನ್ನ ಹಾಗೂ ಬೆಳ್ಳಿ (Gold and Silver Prices) ಬೆಲೆಯಲ್ಲಿ ಭರ್ಜರಿ ಇಳಿಕೆಯಾಗುತ್ತಿದೆ.
ಚಿನ್ನದ ಬೆಲೆ 10 ಗ್ರಾಂಗೆ 290 ರೂ.ನಷ್ಟು ಕಡಿಮೆ ಆಗಿದೆ. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು 2 ಬಾರಿ ಮಾತ್ರ. ಉಳಿದಂತೆ ಚಿನ್ನ ಮತ್ತು ಬೆಲೆಗಳು ಬಹುತೇಕ ಇಳಿದಿವೆ. ಭಾರತದಲ್ಲಿ ಸದ್ಯ 10 ಗ್ರಾಂನ 22 22 ಕ್ಯಾರಟ್ ಚಿನ್ನದ ಬೆಲೆ 56,000 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,100 ರೂ. ಇದೆ. 100 ಗ್ರಾಂ ಬೆಳ್ಳಿ ಬೆಲೆ 7,450 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 56,050 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 7,800 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 24ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,100 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 745 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,830 ರಿಂಗಿಟ್ (51,285 ರುಪಾಯಿ)
ದುಬೈ: 2197.50 ಡಿರಾಮ್ (49,557 ರುಪಾಯಿ)
ಅಮೆರಿಕ: 600 ಡಾಲರ್ (49,682 ರುಪಾಯಿ)
ಸಿಂಗಾಪುರ: 822 ಸಿಂಗಾಪುರ್ ಡಾಲರ್ (50,536 ರುಪಾಯಿ)
ಕತಾರ್: 2,265 ಕತಾರಿ ರಿಯಾಲ್ (51,526 ರೂ)
ಓಮನ್: 240 ಒಮಾನಿ ರಿಯಾಲ್ (51,624 ರುಪಾಯಿ)
ಕುವೇತ್: 188 ಕುವೇತಿ ದಿನಾರ್ (50,662 ರುಪಾಯಿ)