Kornersite

International Just In

ಲೈಂಗಿಕ ತೃಪ್ತಿಗಾಗಿ ಮಾತ್ರೆ ತೆಗೆದುಕೊಂಡು 24 ಗಂಟೆ ಅದೇ ಕೆಲಸ ಮಾಡಿದ…ಮುಂದೇನಾಯ್ತು?

ರೋಮ್‌ : ಇತ್ತೀಚೆಗೆ ಹಲವರು ಲೈಂಗಿಕ ತೃಪ್ತಿಗಾಗಿ ಕಾಮೋತ್ತೇಜಕ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಸೆಕ್ಸ್ ಲೈಫ್‌ ಚೆನ್ನಾಗಿರಬೇಕೆಂದು ವಯಾಗ್ರ ಸೇವಿಸಿದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಟಲಿಯಲ್ಲಿ ನಡೆದಿದೆ.

ಜರ್ಮನಿಯ (German Tourist) 50 ವರ್ಷದ ವ್ಯಕ್ತಿಯೊಬ್ಬ ವಯಾಗ್ರ (Viagra) ಮಾತ್ರೆ ಸೇವಿಸಿ 24 ಗಂಟೆಗೂ ಅಧಿಕ ಕಾಲ ಸೆಕ್ಸ್‌ ನಲ್ಲಿ ತೊಡಗಿದ್ದಾನೆ. ಆರಂಭದಲ್ಲಿ ಆತನ ಗುಪ್ತಾಂಗದಲ್ಲಿ ನೋವು ಕಾಣಿಸಿಕೊಂಡಿದೆ. ನಂತರ ನೋವು ತೀವ್ರವಾಗಿದೆ. ಹೀಗಾಗಿ ಗಾಬರಿಯಾಗಿ ಆಸ್ಪತ್ರೆಗೆ ತೆರಳಿದ್ದಾನೆ. ಪರೀಕ್ಷಿಸಿದ ವೈದ್ಯರು ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ನಿರಂತರ ಸಂಭೋಗದಿಂದ ಗುಪ್ತಾಂಗದ ತುದಿಯಲ್ಲಿರುವ ಸೀಳಿನಲ್ಲಿ ಬಿರುಕು ಬಿಟ್ಟು ರಕ್ತ ಸ್ರಾವವಾಗಿದೆ. ಆದ್ದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿರುವುದಾಗಿ ವೈದ್ಯರು ಹೇಳಿದ್ದಾರೆ. ಇಟಲಿಯ ಗ್ರೊಸೆಟೊ ಆಸ್ಪತ್ರೆಯೊಂದರಲ್ಲಿ ವಿಚಿತ್ರ ಪ್ರಕರಣ ವರದಿಯಾಗಿದೆ. ರಜೆಯ ಮೇಲೆ ಇಟಲಿಗೆ ಪ್ರವಾಸಕ್ಕೆ ಬಂದಿದ್ದ ಜರ್ಮನಿಯ ವ್ಯಕ್ತಿ ನಿರಂತರ ಸಂಭೋಗದಿಂದ ಅಸ್ವಸ್ಥಗೊಂಡಿದ್ದಾನೆ. ಮೇ 11 ರಂದು ಮಿಸೆರಿಕಾರ್ಡಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಆತನ ಪತ್ನಿಯೂ ಆತನೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ