ಸುಪ್ರೀಂ ಕೋರ್ಟ್ ನಲ್ಲಿ ಸಲಿಂಗ ವಿವಾಹದ ಕುರಿತು ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆಯೇ ದೇಶದಲ್ಲಿ ಮತ್ತೊಂದು ಇಂತಹ ವಿವಾಹ ಆಗಿರುವ ವರದಿಯಾಗಿದೆ.
ಕೋಲ್ಕತ್ತಾ ಮೂಲದ ಲೆಸ್ಬಿಯನ್ ದಂಪತಿಗಳು ಸಾಂಪ್ರದಾಯಿಕವಾಗಿ ದೇವಾಸ್ಥಾನದಲ್ಲಿ ವಿವಾಹವಾಗಿದ್ದಾರೆ. ಸದ್ಯ ಈ ಕುರಿತು ಫೋಟೋ ವೈರಲ್ ಆಗಿದೆ. ಕೋಲ್ಕತ್ತಾದ ಬಾಗುಯಾಟಿ ನಿವಾಸಿ ಮೌಸುಮಿ ದತ್ತಾ, ಮೌಮಿತಾ ಮಜುಂದಾರ್ ಸ್ಥಳೀಯ ದೇವಸ್ಥಾನದಲ್ಲಿ ಸೋಮವಾರ (ಮೇ 22) ಸಪ್ತಪದಿ ತುಳಿದಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
LGBTQ ಸಮುದಾಯದ ಭರವಸೆಯ ದಾರಿದೀಪವಾಗಿ ನಾವು ವಿವಾಹವಾಗಿದ್ದೇವೆ ಎಂದು ಹೇಳಿದ್ದಾರೆ. ಕೋಲ್ಕತ್ತಾದಲ್ಲಿ 2018 ರಲ್ಲಿ ಸುಚಂದ್ರ ದಾಸ್ ಮತ್ತು ಶ್ರೀ ಮುಖರ್ಜಿ ವಿವಾಹವಾಗಿದ್ದರು. ಸಲಿಂಗ ವಿವಾಹವು “ಕಾನೂನುಬಾಹಿರ” ವಾಗಿಯೇ ಉಳಿದಿದೆ. ಮೌಸುಮಿ ಹಾಗೂ ಮೌಮಿತಾ ದಂಪತಿಗಳು ಕೋಲ್ಕತ್ತಾದ ಅರಿಟೋಲಾ ಪ್ರದೇಶದ ಭೂತನಾಥ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.