ಬಹುಭಾಷಾ ನಟ ಫೂಡ್ ವ್ಲಾಗರ್ ಆಶಿಷ್ ವಿದ್ಯಾರ್ಥಿ (Ashish Vidyarthi) ತಮ್ಮ 60ನೇ ವಯಸ್ಸಿನಲ್ಲಿ 2ನೇ ವಿವಾಹವಾಗಿದ್ದಾರೆ.
ಆಸ್ಸಾಂ ರೂಪಾಲಿ ಬರುವ (Roopali Baruva) ಎಂಬುವರನ್ನು ಸರಳವಾಗಿ ವಿವಾಹವಾಗಿದ್ದಾರೆ. ಇಬ್ಬರು ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಜೀವನದ ಈ ಹಂತದಲ್ಲಿ ರೂಪಾಲಿಯೊಟ್ಟಿಗೆ ವಿವಾಹವಾಗಿರುವುದು ಬಹಳ ಖುಷಿಯಾಗಿದೆ ಎಂದು ಆಶಿಷ್ ವಿದ್ಯಾರ್ಥಿ ಹೇಳಿದ್ದಾರೆ.
ರೂಪಾಲಿ ಫ್ಯಾಷನ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊಲ್ಕತ್ತದ ಅಪ್ಸ್ಕೇಲ್ ಫ್ಯಾಷನ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ರೂಪಾಲಿ ಹಾಗೂ ಆಶಿಷ್ರ ವಿವಾಹ ಸಹ ಕೊಲ್ಕತ್ತದಲ್ಲಿ ನಡೆದಿದೆ. ಆಶಿಷ್ ವಿದ್ಯಾರ್ಥಿಗೆ ಇದು ಎರಡನೇ ಮದುವೆ. ನಟಿ ಶಕುಂತಲಾ ಅವರ ಪುತ್ರಿ ರಜೋಶಿ ಅವರೊಂದಿಗೆ ಹಿಂದೆ ಮದುವೆಯಾಗಿದ್ದರು. ಇಬ್ಬರೂ ಮದುವೆಯಾಗಿ ಹಲವು ವರ್ಷಗಳ ನಂತರ ದೂರವಾಗಿದ್ದಾರೆ.
ಆಶಿಷ್ ವಿದ್ಯಾರ್ಥಿ ಭಾರತದ ಜನಪ್ರಿಯ ಪೋಷಕ ನಟ ಹಾಗೂ ವಿಲನ್. ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದಾರೆ. ಜನಪ್ರಿಯ ಖಾದ್ಯಗಳನ್ನು ಸವಿಯುತ್ತಾ ಫೂಡ್ ವ್ಲಾಗಿಂಗ್ ಸಹ ಮಾಡುತ್ತಿದ್ದಾರೆ.
ಜೀವನದ ಈ ಹಂತದಲ್ಲಿ ನಾನು ರೂಪಾಲಿಯೊಟ್ಟಿಗೆ ವಿವಾಹವಾಗಿರುವುದು ಅದ್ಭುತವಾದ ಅನುಭವ. ನಾವು ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದೇವೆ. ಆಪ್ತೇಷ್ಟರಿಗಾಗಿ ರಿಸೆಪ್ಷನ್ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.