Bangalore : ಬಂಗಾರ ಹಾಗೂ ಬೆಳ್ಳಿ (Gold and Silver Prices) ಪ್ರಿಯರಿಗೆ ಇಂದು ಕೂಡ ಗುಡ್ ನ್ಯೂಸ್ ಸಿಗುತ್ತಿದೆ.
ಚಿನ್ನದ ದರ ಇಂದು ಕೂಡ ಇಳಿಕೆಯಾಗಿದೆ. ಬಹುತೇಕ ವಿದೇಶ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಇಳಿದಿದೆ. ಬೆಳ್ಳಿ ಬೆಲೆಯ ಸತತ ಇಳಿಕೆಯ ಓಟ ಮುಂದುವರಿದಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,800 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,870 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,305 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,850 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 7,650 ರೂ. ಇದೆ. ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70 ಸಾವಿರ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 26ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,870 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 730.50 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,850 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,920 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,850 ರಿಂಗಿಟ್ (51,018 ರುಪಾಯಿ)
ದುಬೈ: 2200 ಡಿರಾಮ್ (49,593 ರುಪಾಯಿ)
ಅಮೆರಿಕ: 605 ಡಾಲರ್ (50,065 ರುಪಾಯಿ)
ಸಿಂಗಾಪುರ: 823 ಸಿಂಗಾಪುರ್ ಡಾಲರ್ (50,335 ರುಪಾಯಿ)
ಕತಾರ್: 2,260 ಕತಾರಿ ರಿಯಾಲ್ (51,409 ರೂ)
ಓಮನ್: 239 ಒಮಾನಿ ರಿಯಾಲ್ (51,472 ರುಪಾಯಿ)
ಕುವೇತ್: 189 ಕುವೇತಿ ದಿನಾರ್ (50,889 ರುಪಾಯಿ)